ರಾಷ್ಟ್ರೀಯ ಹೆದ್ದಾರಿ ಬದಿ ಸಂಚರಿಸಿದ ಎರಡು ಆನೆಗಳು
ಕೃಷಿ ಬೆಳೆ ಹಾನಿ ಮಾಡಿ ಕೃಷಿಕರ ನಿದ್ದೆಗೆಡಿಸಿದ್ದ ಕಾಡಾನೆಗಳು ನ.12ರಂದು ಬೆಳಿಗ್ಗೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ರಸ್ತೆ ಬದಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದಾರೆ.ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿಸಿದ್ದು, ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆ. ಕನಕಮಜಲು ಗ್ರಾಮದ ಕುಲ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ಹಾನಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಆನೆಗುಂಡಿ ಪರಿಸರದ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.