ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿಯಿದ್ದರೇ ಅದು ಹಿಂದೂ ಧರ್ಮಕ್ಕೆ ಮಾತ್ರ ಸಾಧ್ಯ, ತಾಯಿಗಿಂತಲೂ ಗೋವು ಮೇಲು, ಗೋಮಾತೆ ಪ್ರಪಂಚಕ್ಕೆ ತಾಯಿ – ರವೀಶ್ ತಂತ್ರಿ

ಮನುಷ್ಯನ ಪ್ರತಿಯೊಂದು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವ ಶಕ್ತಿಯಿದ್ದರೇ ಅದು ಹಿಂದೂ ಧರ್ಮಕ್ಕೆ ಮಾತ್ರ ಸಾಧ್ಯ. ತ್ಯಾಗ ಮತ್ತು ಸೇವೆಯ ಪ್ರತೀಕವಾಗಿರುವವಳು ತಾಯಿ, ಆದರೇ ತಾಯಿಗಿಂತ ಮೇಲು ಪ್ರಪಂಚಕ್ಕೆ ತಾಯಿಯಾಗಿರುವವಳು ಗೋಮಾತೆ. ಗೋವಿಗಿಂತ ತ್ಯಾಗಮಯಿಯಾಗಿರುವ ಜೀವ ಬೇರೊಂದು ಇಲ್ಲ. ಅದಕ್ಕಾಗಿ ನಾವು ಗೋವನ್ನು ಪೂಜೆ ಮಾಡುತ್ತೇವೆ ಎಂದು ಕುಂಟಾರು ರವೀಶ್ ತಂತ್ರಿ ಹೇಳಿದರು. ಅವರು ಎಲಿಮಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಅಯೋಧ್ಯೆ ಶಾಖೆಯ ಆಶ್ರಯದಲ್ಲಿ ನ.11 ರಂದು ಎಲಿಮಲೆಯಲ್ಲಿ ನಡೆದ ಸಾರ್ವಜನಿಕ ಗೋ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

. . . . . . . . .

ವಕ್ಪ್ ಬೋರ್ಡ್ ಅನ್ನು ಹಿಂದೂ ಸಮಾಜದ ಮೇಲೆ ಹೇರುವ ಪ್ರಯತ್ನ ಬೇಡ. ನಮ್ಮ ಸಮಾಜದ ಒಂದಿಂಚೂ ಜಾಗವನ್ನು ಮುಟ್ಟಲು ಬಂದರೇ ಹಿಂದೂ ಸಮಾಜದ ಶಕ್ತಿ ಏನು ಎಂದು ತೋರಿಸಿಕೊಡಬೇಕಾಬಹುದು ಎಂದರು. ಈ ಸಮಸ್ಯೆ ಬಗ್ಗೆ ನೀವ್ಯಾರು ಚಿಂತೆ ಮಾಡಬೇಡಿ ಕೇಂದ್ರ ಸರಕಾರ ಇದಕ್ಕೆ ಸರಿಯಾದ ದಾರಿ ತೋರಿಸಲಿದೆ ಎಂದು ಗೃಹ ಮಂತ್ರಿ ಹೇಳಿಕೆಯನ್ನು ಉಲ್ಲೇಖಿಸಿದರು. ಅಂತಹ ಸಂದರ್ಭ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸುವ ಎಂದರು. ಹಿಂದೆ ಹಿಂದೂ ಸಮಾಜವನ್ನು ಟೀಕಿಸಿದರೇ ಮಾತ್ರ ಪ್ರಶಸ್ತಿ, ಸ್ಥಾನಮಾನ ಸಿಗುವ ಕಾಲ ಇತ್ತು ಅದು ಈಗ ಬದಲಾಗಿದೆ. ಕೇರಳದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಕ್ಕೂ ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜ ಬಲಷ್ಠವಾಗಿ ಸಂಘಟಿವಾಗುತ್ತಿರುಂದಲೇ ಇಂದು ನಮ್ಮನ್ನು ಭಯಪಡಿಸುವವರ ಸಂಖ್ಯೆ, ವಿರೋಧಿಸುವವರ ಸಂಖ್ಯೆ ಕಡಿಮೆಯಾಗಿದೆ. ಅಷ್ಠಮಿ ಆಚರಣೆ, ಗಣೇಶೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯುವಂತಾಗಿದೆ. ಕಾಸರಗೋಡು ಭಾಗದಲ್ಲಿ ಬಾಲಗೋಕುಲ, ಗೋಶಾಲೆ ಆರಂಭಿಸುವುದರ ಮೂಲಕ ಸಮಾಜದಲ್ಲಿ ಬದಲಾವಣೆ ಕಾಣಲು ಪ್ರಾರಂಭವಾಗಿದೆ.

. . . . . . .

ನಮ್ಮ ಧರ್ಮ ಉಳಿಯಬೇಕಾದರೇ ಧರ್ಮದ ಮೇಲಾಗುವ ಅವಹೇಳನ, ಆಕ್ರಮಣಗಳನ್ನು ಧೈರ್ಯದಿಂದ ಎದುರಿಸಬೇಕಿದೆ. ಅದಕ್ಕಾಗಿ ಯುವಶಕ್ತಿ ಹಾಗೂ ಸಮಾಜ ಜಾಗೃತವಾಗಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ, ಚಿಕ್ಕ ಮಕ್ಕಳಲ್ಲಿಯೂ ಧರ್ಮದ ಜಾಗೃತಿ ಮೂಡಬೇಕಿದೆ. ನಮ್ಮ ಯುವತಿಯರು ಲವ್ ಜಿಹಾದ್ ಗೆ ಹಾಗೂ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತರಾಗಬೇಕಿದೆ

ಹಿಂದುಗಳಾದ ನೀವು ನಿಮ್ಮ ಕರ್ತವ್ಯ ಮಾಡಿದರೇ ಸಾಕು, ಮತ್ತೆ ಎಲ್ಲಾ ನಾನು ನೋಡಿಕೊಳ್ತೇನೆ, ಧರ್ಮ ಸ್ಥಾಪನಾ ಕಾರ್ಯ ನಾನು ಮಾಡ್ತೇನೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ನಮ್ಮ ಕರ್ತವ್ಯ ಯಾವುದೆಂದರೇ ಧರ್ಮ ರಕ್ಷಣೆ ಕಾರ್ಯದಲ್ಲಿ ಭಾಗಿಯಾಗುವುದಷ್ಟೇ ಎಂದರು. ಧರ್ಮ ಸ್ಥಾಪನೆಗೆ ಬೇಕಾಗಿ ಅವರಾರ ತಾಳ್ತೇನೆ ಅಥವಾ ಯಾರಾದ್ರೂ ಆತ್ಮದಲ್ಲಿ ಸೇರಿಕೊಳ್ತೇನೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ, ಅದನ್ನೀಗ ನೀವು ಕಾಣಬಹುದು ಧರ್ಮ ಸ್ಥಾಪನೆಯಾಗುತ್ತಿರುವುದಕ್ಕೆ ಹಲವಾರು ಉದಾಹರಣೆ ಕೊಡಬಹುದು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸ್ವಯಂ ಸೇವಕ ಆನಂದ ಪ್ರಭು ಎಲಿಮಲೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಯೋಧ್ಯೆ ಶಾಖೆ ಎಲಿಮಲೆ ಇದರ ಅಧ್ಯಕ್ಷರಾದ ಭೋಜಪ್ಪ ಗೌಡ ಹರ್ಲಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್. ಸಂಘಚಾಲಕರಾದ ಚಂದ್ರಶೇಖರ ತಳೂರು, ಕೊರಗಜ್ಜ ದೈವದ ಪಾತ್ರಿ ಶೀನ ನಾರ್ಣಕಜೆ, ವಿ.ಎಚ್.ಪಿ. ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ವಿ.ಎಚ್.ಪಿ. ಸುಳ್ಯ ಪ್ರಖಂಡದ ಕಾರ್ಯದರ್ಶಿ ನವೀನ್ ಎಲಿಮಲೆ, ವಿ.ಹೆಚ್.ಪಿ‌. ತಾಲೂಕು ಸಂಯೋಜಕ ಹರಿಪ್ರಸಾದ್ ಬಿ.ವಿ., ಎಲಿಮಲೆ ಶಾಖೆಯ ಗೋರಕ್ಷಾ ಪ್ರಮುಖ್ ನಾಗರಾಜ ಕೇಪಳಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭೂ ಸೇನಾ ಸೈನಿಕರುಗಳಾದ ಸಂದೇಶ್ ಅಂಬೆಕಲ್ಲು ಮತ್ತು ಹರ್ಷಿತ್ ಎಸ್.ಎನ್, ನಾಟಿವೈದ್ಯೆ ಸರಸ್ವತಿ ಎಲಿಮಲೆ, ಉರಗ ತಜ್ಞ ಗಿರಿಧರ ಮಂದ್ರಪ್ಪಾಡಿ, ಮೆಸ್ಕಾಂ ಸಿಬ್ಬಂದಿ ಸತೀಶ್ ಪಾಟೀಲ್ ರನ್ನು ಸನ್ಮಾನಿಸಲಾಯಿತು. ಸಂಜೆ ಗಂಟೆ 6 ರಿಂದ ಭಜನಾ ಕಾರ್ಯಕ್ರಮ ಹಾಗೂ ಮಕ್ಕಳಿಂದ ಕುಣಿತ ಭಜನೆ ನಡೆಯಿತು.

ಶಾಲಿನಿ ಹರಿಪ್ರಸಾದ್ ಸ್ವಾಗತಿಸಿ, ಕುಲದೀಪ್ ಹರ್ಲಡ್ಕ ವಂದಿಸಿದರು. ಪೂರ್ವಿ ಅಂಬೆಕಲ್ಲು ಪ್ರಾರ್ಥಿಸಿದರು, ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading