ಅಮರ ಮ್ಯಾರಥಾನ್ ಹಾಗೂ ಅಮರ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ನ. 10 ಆದಿತ್ಯವಾರದಂದು ಅಮರ ಮ್ಯಾರಥಾನ್ ಹಾಗೂ ಅಮರ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಅಮರ ಮ್ಯಾರಥಾನ್ ಗೆ ರಾಷ್ಟ್ರೀಯ ಕ್ರೀಡಾಪಟು ರಾಜೀವಿ ಗೋಳ್ಯಾಡಿ ಚಾಲನೆಯನ್ನು ನೀಡಿದರು. ಈ ಸಭೆಯ ಅಧ್ಯಕ್ಷತೆಯನ್ನು ಅಮರ ಸಂಘಟನಾ ಅಧ್ಯಕ್ಷರಾದ ಸಾತ್ವಿಕ್ ಮಾಡಪ್ಪಾಡಿ ವಹಿಸಿದ್ದರು. ಗ್ರಾಮಪಂಚಾಯತ್ ಅಧ್ಯಕ್ಷರಾದ ಜಾನಕಿ ಇವರು ಉದ್ಘಾಟಿಸಿದರು. ನಂತರ ಈ ಕಾರ್ಯಕ್ರಮದ ಸಮಾಜಸೇವಕ ಚಂದ್ರಶೇಖರ ಕಡೋಡಿ ಇವರನ್ನು ಅಮರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅಥಿತಿಗಳಲಾದ ಸತೀಶ್ ಪಿಲಿಕಜೆ ಮತ್ತು ಜಯಪ್ರಕಾಶ್ ದೊಡ್ಡಿಹಿತ್ಲು ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶುಭಹಾರೈಸಿದರು. ಮ್ಯಾರಥಾನ್ ಭಾಗವಹಿಸಿದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಜನಿಕಾಂತ್ ಉಮ್ಮಡ್ಕ ಸ್ವಾಗತಿಸಿ, ಕೀರ್ತನ್ ಪಾರೆ ವಂದಿಸಿದರು. ತೀರ್ಥಶ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .

ಸುಮಾರು 15 ಸ್ಪರ್ಧಾಳುಗಳು ಭಾಗವಹಿಸಿದ್ದರು. ಹುಡುಗಿಯರ ವಿಭಾಗ ಮತ್ತು ಹುಡುಗರ ವಿಭಾಗ ಪ್ರತ್ಯೇಕ ಮಾಡಲಾಗಿತ್ತು ಅಮರ ಮ್ಯಾರಥಾನ್ ನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುನೀತ್ ರಾಜ್ ಸಂಕೇಶ, ದ್ವಿತೀಯ ರತ್ನಾಕರ ಪೈಲಾರು, ತೃತೀಯ ಅಭಿಲಾಷ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ರಮ್ಯಾ ಕೆ., ದ್ವಿತೀಯ ಅನುಶ್ರೀ ಕುಕ್ಕುಜಡ್ಕ, ತೃತೀಯ ಹಸ್ತ ಕೆರೆಮೂಲೆ ಪಡೆದುಕೊಂಡರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading