ಸುಳ್ಯ ನಗರದ ವಿವಿಧ ಕಡೆ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳ ರಾಶಿ ಹಾಕಲಾಗಿದ್ದು, ಇದನ್ನು ತೆರವು ಮಾಡಲು ಸೂಚನೆ ನೀಡಬೇಕೆಂದು ನ.ಪಂ. ಸದಸ್ಯ ಶರೀಫ್ ಕಂಠಿ ಪುತ್ತೂರು ಸಹಾಯಕ ಕಮಿಷನರ್ ರಿಗೆ ಮನವಿ ಮಾಡಿದ್ದಾರೆ. ಸುಳ್ಯ ಗಾಂಧಿನಗರ ಕೆಪಿಎಸ್ ಕ್ರೀಡಾಂಗಣದಲ್ಲಿ ಅಂಗನವಾಡಿ ಕೇಂದ್ರ ಮುಂಭಾಗ ವಿದ್ಯುತ್ ಕಂಬದ ದೊಡ್ಡ ರಾಶಿಯೇ ಇದೆ. ಅಲ್ಲದೆ ರಸ್ತೆಯ ಇತರ ಕಡೆಯಲ್ಲಿಯೂ ಕಂಬಗಳ ರಶಿ ಹಾಕಲಾಗಿದ್ದು ಇದರಿಂದ ತೊಂದರೆಯಾಗುತ್ತಿದೆ. ಇದನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಂಬ ತೆರವು ಮಾಡಲು ಸೂಚನೆ ನೀಡಬೇಕಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
- Tuesday
- January 28th, 2025