ಸುಳ್ಯ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರ, ಸುಳ್ಯ ಪ್ರಖಂಡ ವತಿಯಿಂದ ಎರಡನೇ ವರ್ಷದ ಸಾರ್ವಜನಿಕ ಗೋಪೂಜೆ ಕಾರ್ಯಕ್ರಮವು ನ.೯ ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಸುಳ್ಯ ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಡಿ.ವಿ.ಲೀಲಾಧರ್ ಮಾತನಾಡಿ, ಆಧುನಿಕ ಕಾಲದ ಹಿಂದೆ ಓಡುತ್ತಿರುವ ಇಂದಿನ ಯುವಜನತೆ, ನಮ್ಮೆಲ್ಲ ಆರಾಧನೆ, ಸಾಂಸ್ಕೃತಿಯನ್ನು ತಿಳಿಯಲು ಇಂತಹ ಕಾರ್ಯಕ್ರಮ ಅಗತ್ಯ. ಗೋಪೂಜೆ ವೇದಕಾಲದಿಂದಲೇ ನಡೆದುಕೊಂಡು ಬಂದಿದೆ. ಈ ಹಿಂದೆ ಪ್ರತೀ ಮನೆಯಲ್ಲೂ ಗೋಪೂಜೆ ಗೋ ಸಾಕಾಣಿಕೆ ಮಾಡಲಾಗುತ್ತಿತ್ತು. ಆದರೆ ಇಂದು ಅದು ಸೀಮಿತವಾಗಿದೆ. ವಿಶ್ವ ಹಿಂದು ಪರಿಷದ್ ವತಿಯಿಂದ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ ಎಂದರು.
ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷದ್ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ದಿಕ್ಸೂಚಿ ಭಾಷಣ ಮಾಡಿದರು. ಸುಳ್ಯ ನಗರ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಉಪ್ಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ, ಬಜರಂಗದಳ ಪುತ್ತೂರು ಜಿಲ್ಲಾ ಸಾಒ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಪೂಜಾರಿಮನೆ, ವಿಶ್ವಹಿಂದು ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಸುಳ್ಯ ನಗರ ಬಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ಬಜರಂಗದಳ ಗೋರಕ್ಷಾ ಪ್ರಮುಖ್ ರಾಜೇಶ್ ಕಲ್ಲುಮುಟ್ಲು ಸ್ವಾಗತಿಸಿದರು. ತೀರ್ಥೇಶ್ ನಾರ್ಣಕಜೆ, ಗಿರೀಶ್ ಕುಂಟಿಣಿ ಕಾರ್ಯಕ್ರಮ ನಿರೂಪಿಸಿದರು. ದೇವಳದ ಬಳಿಕ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಪೂಜೆ ನೆರವೇರಿಸಿ ಆಹಾರ ನೀಡಲಾಯಿತು. ಕುಣಿತ ಭಜನೆ ನಡೆಯಿತು.