Ad Widget

ಊರಿನವರ ಕಂಬನಿಯೊoದಿಗೆ ಪಂಚ ಭೂತಗಳಲ್ಲಿ ಲೀನನಾದ ರಚನಾ

. . . . . . .

ಸುಳ್ಯ: ಉಬರಡ್ಕ ಗ್ರಾಮದ ಸೂತೋಂಡು ಎಂಬಲ್ಲಿ ತನ್ನ ಒಡ ಹುಟ್ಟಿದ ತಂಗಿಯನ್ನು ತನ್ನ ದ್ವಿಚಕ್ರ ವಾಹನವಾದ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಯಮರಾಯನ ರೂಪದಲ್ಲಿ ಬಂದ ಬಸ್ಸಿಗೆ ಪರಸ್ಪರ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪುತ್ತಿದ್ದಂತೆ ಸಾವಿನ್ನಪ್ಪಿದ ಪ್ರತಿಭಾನ್ವಿತೆ ಊರಿನ ಜನತೆ, ಶಿಕ್ಷಕರು, ಸಹಪಾಠಿಗಳ ಮೆಚ್ಚಿನ (ರಚ್ಚು) ರಚನಾ ಇಂದು ಮಧ್ಯಾಹ್ನ ಪಂಚ ಭೂತಗಳಲ್ಲಿ ಲೀನಲಾದಳು.

ನ.೮ರಂದು ಅಪಘಾತ ಸಂಭವಿಸಿ ಮೃತಪಟ್ಟ ರಚನರ ಅಂತಿಮ ದರ್ಶನದ ವ್ಯವಸ್ಥೆಯನ್ನು ಸುಳ್ಯದ ಯುವ ಜನ ಸಂಯುಕ್ತ ಮಂಡಳಿ ಸುಳ್ಯ ಇದರ ವೇದಿಕೆಯಲ್ಲಿ ಮುಂಜಾನೆಯಿoದ ಇರಿಸಲಾಗಿತ್ತು ಇಲ್ಲಿ ಸಾಗಾರೋಪಾದಿಯಲ್ಲಿ ರಚನಳ ಮಿತ್ರರು , ಶಿಕ್ಷಕರು, ಹಾಗೂ ಊರಿನ ಜನತೆ ತಮ್ಮ ನೆಚ್ಚಿನ ರಚನಾಳ ಮೃತದೇಹ ಕಂಡು ಬಿಕ್ಕಳಿಸಿ ಅಳುವ ದೃಶ್ಯವು ಮನ ಕಲಕುವಂತಿತ್ತು. ರಚನಾಳ ಅಂತಿಮ ದರ್ಶನಕ್ಕಾಗಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ , ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳು, ಕಾರ್ಯಕರ್ತರು, ಶಿಕ್ಷಣ ಇಲಾಖೆಯ ನೌಕರರು ಹಾಗೂ ಶಿಕ್ಷಕರು, ಸರಕಾರಿ ಇಲಾಖೆಗಳ ಅಧಿಕಾರಿಗಳು, ಕಾಲೇಜು ಆಡಳಿತ ಮಂಡಳಿ ಸದಸ್ಯರು ಸಹಪಾಠಿಗಳು, ರಾಜ್ಯ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಹಾಗೂ ಪ್ರಸ್ತುತ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗವು ಆಗಮಿಸಿ ಅಂತಿಮ ದರ್ಶನ ಪಡೆದರು ಬಳಿಕ ಮೃತದೇಹವನ್ನು ರಚನಾಳ ಮನೆಗೆ ಕೊಂಡೊಯ್ಯಲಾಯಿತು . ಅಲ್ಲಿ ಕ್ರಿಯಾ ವಿಧಿವಿಧಾನಗಳನ್ನು ಪೂರೈಸಿ ಪ್ರತಿಭಾನ್ವಿತೆ ಊರಿನ ಹಾಗೂ ತಂದೆ ತಾಯಿಯ ಮುದ್ದಿನ ಮಗಳ ಅಂತಿಮ ಸಂಸ್ಕಾರ ನಡೆಸಲಾಯಿತು.
ಮೃತ ರಚನಾ ತಂದೆ ನಾರಾಯಣ ಕಾಡುತೋಟ, ತಾಯಿ ರಾಜೇಶ್ವರಿ, ತಂಗಿ ಅನನ್ಯ ಹಾಗೂ ಅಪಾರ ಬಂಧು ಬಳಗರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!