
ಸುಳ್ಯ : ಐನೆಕಿದು ಗ್ರಾಮದ ಕೆದಿಲ ಎಂಬಲ್ಲಿ ಶುಕ್ರವಾರ ರಾತ್ರಿ ಕೃಷಿಕರ ತೋಟಕ್ಕೆ ಕಾಡಾನೆ ನುಗ್ಗಿ ಅಪಾರ ಪ್ರಮಾಣದ ಅಡಿಕೆ ಗಿಡ, ಬಾಳೆ ಗಿಡ ಹಾಗೂ ನೀರು ಹಾಯಿಸಲು ಅಳವಡಿಸಿದ ಪೈಪುಗಳಿಗೆ ಹಾನಿಯಾಗಿದೆ.
ಯಶಸ್ ಕೆದಿಲ, ಷಣ್ಮುಖ ಕೆದಿಲ, ನೀಲಪ್ಪ ಗೌಡ ಇವರ ತೋಟಕ್ಕೆ ತಡರಾತ್ರಿ ನುಗ್ಗಿದ ಆನೆಗಳು ಕೃಷಿ ತೋಟಕ್ಕೆ ಹಾನಿ ಮಾಡಿವೆ. ಯಶಸ್ ಕೆದಿಲ ಅವರ ತೋಟದಲ್ಲಿ ಅಪಾರ ಪ್ರಮಾಣದ ಬಾಳೆ ಗಿಡ, ಅಡಿಕೆ ಗಿಡವನ್ನು ನಾಶವಾಗಿದೆ. ಇತ್ತೀಚಿನ ದಿನಗಳಲ್ಲಿ ಆಗಾಗ ಈ ಭಾಗದಲ್ಲಿ ಆನೆ ದಾಳಿ ಮಾಡುತಿದ್ದು ಕೃಷಿಕರು ತೀವ್ರ ಆತಂಕಕ್ಕೀಡಾಗಿದ್ದಾರೆ.