

ಬೆಳ್ಳಾರೆ :ಅಯ್ಯನಕಟ್ಟೆಯಿಂದ ಚೊಕ್ಕಾಡಿ ಯನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಇರುವ ಮೋರಿಯ ಮೇಲ್ಭಾಗದಲ್ಲಿ ಮಣ್ಣು ಕುಸಿದು ಡಾಮರು ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದೆ. ವಾಹನ ಸವಾರರ ಅರಿವಿಗೆ ಬಾರದೆ ವಾಹನಗಳ ಚಕ್ರವು ರಸ್ತೆಯಲ್ಲಿನ ಹೊಂಡದ ಒಳಗೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ಆಡಳಿತ ಯಂತ್ರವು ತಕ್ಷಣವೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಸರಿಪಡಿಸಿ ಮುಂದಾಗುವ ಅಪಾಯವನ್ನ ತಡೆಗಟ್ಟಬೇಕಾಗಿದ್ದು ಈ ವರದಿಯ ಬಳಿಕವಾದರು ಸಮಸ್ಯೆಗಳನ್ನು ಪರಿಹರಿಸುವುದೇ ಎಂದು ಕಾದು ನೋಡಬೇಕಿದೆ.

