Ad Widget

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭಾಂಗಣದಲ್ಲಿ ನ.೫ರಂದು ನಡೆಯಿತು.
ವಸತಿ ಸಂಬoಧಿಸಿದ ಹಂಚಿಕೆ ಮಾಡಲಾದ ತಾತ್ಕಲಿಕ ಪಟ್ಟಿಯ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ನಗರ ಪಂಚಾಯತ್‌ಗಳಲ್ಲಿ ಸೀಮಿತ ಅನುದಾನ ಇರುವಾಗ ಇಲ್ಲಿನ ಅನುದಾನವನ್ನು ನಗರದ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಬಳಸಬೇಕು. ಮತ್ತಿತರ ಕೆಲಸಗಳಿಗೆ ಎಂಎಲ್‌ಎ, ಎಂಪಿ, ಎಂಎಲ್‌ಸಿಗಳ ಅನುದಾನವನ್ನು ತರಿಸಿಕೊಳ್ಳುವ ಕೆಲಸ ಆಗಬೇಕು ಎಂದು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಶಾಲೆಯೊಂದರ ತಡೆಗೋಡೆ ನಿರ್ಮಾಣಕ್ಕೆ ಸಂಬoಸಿದoತೆ ಚರ್ಚೆ ನಡೆಯಿತು. ನಗರ ಪಂಚಾಯತ್ ವತಿಯಿಂದ ವಿವಿಧೆಡೆ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಚರ್ಚೆ ನಡೆಯಿತು. ಅಪರಾಧ ಪ್ರಕರಣ ಪತ್ತೆಗೆ ಸಂಬoಧಿಸಿದoತೆ ಪೊಲೀಸ್ ಇಲಾಖೆ ಸಲಹೆ ಕೇಳಿ ಸಿಸಿ ಕೆಮರಾ ಅಳವಡಿಸೋಣ ಎಂದು ಮುಖ್ಯಾಧಿಕಾರಿ ತಿಳಿಸಿದರು. ಕಸ ಎಸೆಯುವುದನ್ನು ಪತ್ತೆ ಹಚ್ಚಲು ಸಿಸಿ ಕೆಮರಾ ಅಳವಡಿಸಿದಲ್ಲಿ, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಿಬ್ಬಂದಿಗಳಿಗೆ ಸೂಚಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಸಾಮಾನ್ಯ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಸದಸ್ಯ ರಿಯಾಝ್ ಕಟ್ಟೆಕಾರ್ ಅವರು, ಪಂ.ನ ಯಾವ ಸದಸ್ಯರು ಸರಿಯಿಲ್ಲ, ಕೇವಲ ಹೆಸರಿಗಾಗಿ ಮಾತ್ರ ಚರ್ಚೆ ಮಾಡುತ್ತಾರೆ. ಇಲ್ಲಿನ ಸಭೆಯಲ್ಲಿ ಚರ್ಚೆ ಆಗುತ್ತದೆ, ಆದರೆ ಅಭಿವೃದ್ಧಿ ಮಾಡುತ್ತಿಲ್ಲ ಎಂದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವೆಂಕಪ್ಪ ಗೌಡ ಮಾತನಾಡಿ, ನೀವು ಸರಿಯಾಗಿ ಸಭೆ ಬರುವುದಿಲ್ಲ, ಅಭಿವೃದ್ಧಿ ಹೇಗೆ ಆಗುವುದು ಎಂದರು. ಶಿಲ್ಪಾ ಸುದೇವ್ ಮಾತನಾಡಿ, ಸದಸ್ಯರು ಅವರವರ ವಾರ್ಡ್ನ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಸರಕಾರದಿಂದ ಅನುದಾನ ಬಂದಲ್ಲಿ ಕೆಲಸ ಆಗುತ್ತದೆ. ಸದಸ್ಯರು ಸರಿ ಇಲ್ಲ ಎಂದು ಹೇಳಬಾರದು ಎಂದರು. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ, ಸದಸ್ಯರು ಅವರವರ ವಾರ್ಡ್ನ ಸಮಸ್ಯೆಗಳ ಬಗ್ಗೆ ಮಾತನಾಡಲಿ, ನೀವು ಬೇರೆ ಸದಸ್ಯರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು. ಈ ವೇಳೆ ಸದಸ್ಯ ರಿಯಾಝ್ ಅವರು ಸಭೆಯಿಂದ ಹೊರ ನಡೆದರು.
ಜಯನಗರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಅನುದಾನ ಬಗ್ಗೆ ಚರ್ಚೆ ನಡೆಯುವ ವೇಳೆ ಶಾಸಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ, ಸರಕಾರದಿಂದ ಅನುದಾನ ಬಂದ ಬಳಿಕ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಸದಸ್ಯೆ ಶಿಲ್ಪಾ ತಿಳಿಸಿದರು. ಈ ವೇಳೆ ಪುತ್ತೂರಿಗೆ ಅನುದಾನ ಬರುತ್ತದೆ, ಇಲ್ಲಿಗೆ ಯಾಕೆ ಅನುದಾನ ಬರುತ್ತಿಲ್ಲ, ಇಲ್ಲಿನ ಶಾಸಕರು ವಿಶೇಷ ಅನುದಾನಕ್ಕೆ ಪ್ರಯತ್ನಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು. ಚರ್ಚೆಯ ನಡುವೆ ನಾಮನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೋ ಅವರು ಇಲ್ಲಿಯ ಶಾಸಕರಿಗೆ ತಾಕತ್ ಇಲ್ಲ ಎಂದು ಹೇಳಿದ ಮಾತಿಗೆ ಅಧ್ಯಕ್ಷರು ಸಹಿತ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬಾರೀ ಚರ್ಚೆ ನಡೆದು, ಅವರು ಬೇರೆ ಉದ್ದೇಶದಿಂದ ಆ ಪದ ಬಳಕೆ ಮಾಡಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಸಮಾಧಾನ ಪಡಿಸಲು ಮುಂದಾದರು. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ, ಸಭೆಯಲ್ಲಿ ಯಾವುದೇ ಅಸಂಬದ್ಧ ಮಾತು, ರಾಜಕೀಯ ಪ್ರೇರಿತ ಮಾತು ಬರಬಾರದು ಅದನ್ನು ಗಮನದಲ್ಲಿಟ್ಟು ಸದಸ್ಯರು ಮಾತನಾಡಬೇಕು. ಸಭೆಯನ್ನು ಗಮನದಲ್ಲಿಟ್ಟು ಚರ್ಚೆ ಆಗಬೇಕು. ಅಧ್ಯಕ್ಷರ ಮಾತಿಗೆ ಗೌರವ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ನಿವೇಶನಾ ಹಂಚಿಕೆ ಬಗ್ಗೆ ಚರ್ಚೆ ನಡೆಯಿತು. ವಿನಯ ಕುಮಾರ್ ಕಂದಡ್ಕ ಮಾತನಾಡಿ, ಈ ಹಿಂದೆ ನಿವೇಶನಾ ರಹಿತರು ನಿವೇಶನಾ ಪಡೆದು ಬಳಿಕ ಅದನ್ನು ಬೇರೆಯವರಿಗೆ ನೀಡಿದ್ದಾರೆ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ನೀವು ಸಿದ್ದರಾಮಯ್ಯ ಅವರ ಬಗ್ಗೆ ಮೈಸೂರಿನ ಮೂಡಾ ಪ್ರಕರಣದ ಬಗ್ಗೆ ಮಾತನಾಡುತ್ತೀರಿ, ಹಾಗಾದರೆ ಇಲ್ಲಿಯೂ ಅದೇ ರೀತಿ ನಡೆದಿದೆ ಅಲ್ಲವೇ ಎಂದರು. ವಿನಯಕುಮಾರ್ ಕಂದಡ್ಕ ಮಾತನಾಡಿ, ಹಾಗಾದರೆ ಸಿದ್ದರಾಮಯ್ಯ ಅವರು ಆ ರೀತಿ ಮಾಡಿದ್ದಾರೆ ಎಂದು ನೀವು ಒಪ್ಪಿಕೊಳ್ಳುತ್ತೀರಾ ಎಂದು ಕೌಂಟರ್ ನೀಡಿದರು. ನಿವೇಶನಾ ರಹಿತರ ಅರ್ಜಿಯ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಅವರಿಗೆ ನೀವೇಶನಾ ನೀಡುವ ಬಗ್ಗೆ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು.
ಕಸ ಸಾಗಾಟ ವಾಹನಗಳ ದುರಸ್ತಿ ವಿಚಾರ, ನಗರದಲ್ಲಿ ಸರಕಾರಿ ಜಾಗದಲ್ಲಿ ಮರ ಕಡಿದು ಸಾಗಾಟಕ್ಕೆ ಯತ್ನಿಸಲಾಗಿದೆ ಎಂದು, ವಿದ್ಯಾಸಂಸ್ಥೆಗಳು, ಸರಕಾರಿ ಇಲಾಖೆಗಳು ಕಾರ್ಯಕ್ರಮಗಳಿಗೆ ನಗರ ಪಂಚಾಯತ್‌ಗೆ ಆಹ್ವಾನ ನೀಡಬೇಕು ಎಂದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾ?ಕಾರಿ ಸುಧಾಕರ್, ನಗರ ಪಂಚಾಯತ್ ಸದಸ್ಯರು, ಅ?ಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!