ಅಜ್ಜಾವರ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ದೇವಕಿ ಕಾಟಿಪಳ್ಳ ವಿಷ್ಣುನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಜ್ಜಾವರ ಗ್ರಾ.ಪಂ.ಅಧ್ಯಕ್ಷರಾಗಿದ್ದ ಬೇಬಿ ಅವರ ರಾಜಿನಾಮೆ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ನ.೭ ರಂದು ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.
ಅಜ್ಜಾವರ ಗ್ರಾ.ಪಂ. ನ ಅಧ್ಯಕ್ಷತೆ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಕಳೆದ ಬಾರಿ ಅಧ್ಯಕ್ಷತೆ ಆಯ್ಕೆ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಬೇಬಿ ಮತ್ತು ದೇವಕಿ ಆಕಾಂಕ್ಷಿಗಳಾಗಿದ್ದರು. ಬಳಿಕ ಮಾತುಕತೆ ನಡೆದು ಒಂದೂಕಾಲು ವರ್ಷದಂತೆ ಇಬ್ಬರಿಗೂ ಅಧ್ಯಕ್ಷತೆ ಹಂಚಿಕೊಡಲು ಪಕ್ಷದ ನಾಯಕರು ನಿರ್ಧರಿಸಿದರು. ಅದರಂತೆ ಮೊದಲ ಅವಧಿಗೆ ಅಡ್ಪಂಗಾಯ ವಾರ್ಡ್ ಸದಸ್ಯೆ ಬೇಬಿ ಅಧ್ಯಕ್ಷರಾದರು. ಬೇಬಿಯವರ ಅಧ್ಯಕ್ಷತೆ ಒಂದೂಕಾಲು ವರ್ಷ ಪೂರ್ಣಗೊಳ್ಳುತಿದ್ದಂತೆ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ನ.7ರಂದು ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೇವಕಿಯವರು ಅಧ್ಯಕ್ಷತೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷತೆಗೆ ದೇವಕಿಯವರ ಹೆಸರನ್ನು ಸದಸ್ಯ ಪ್ರಸಾದ್ ರೈಯವರು ಸೂಚಿಸಿದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಮಂಜುಳಾ ಆಯ್ಕೆ ಪಕ್ರಿಯೆ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಚಂದ್ರಕಾಂತ್ ಎಂ ಆರ್ ಪಕ್ಷದ ಪ್ರಮುಖರಾದ ರಂಜಿತ್ ರೈ ಮೇನಾಲ , ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್ ಪಂ ಸದಸ್ಯರಾದ ಅಬ್ದುಲ್ಲ , ವಿಶ್ವನಾಥ , ರಾಹುಲ್ ಅಡ್ಪಂಗಾಯ , ಶ್ವೇತ ಪುರುಷೋತ್ತಮ ಶಿರಾಜೆ , ಅಬ್ಬಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.