ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನ.4 ರಂದು ಚಾಲನೆ ನೀಡಲಾಯಿತು. ದೇವರಕಾನ ವಾರ್ಡಿನ ಕಲ್ಲೋಣಿ-ಕುಳ್ಳಂಪ್ಪಾಡಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯು ಕುಳ್ಳಂಪ್ಪಾಡಿ ಎಂಬಲ್ಲಿ ನಡೆಯಿತು. ಒಟ್ಟು 41,91,000.00 ಮೊತ್ತದ ಮಳೆಹಾನಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಿತು. ಈ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ,ಐವರ್ನಾಡು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಕುತ್ಯಾಡಿ , ಐವರ್ನಾಡು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೀಲಾಡಿ ರವರು ಹಾಗೂ ವಾರ್ಡಿನ ಸದಸ್ಯರು ಹಾಗೂ ಊರಿನ ಪ್ರಮುಖರ ಸಮ್ಮುಖದಲ್ಲಿ ಶ್ರೀ ಹರ್ಷ ಗೌಡ ಕುಳ್ಳಂಪ್ಪಾಡಿರವರು ತೆಂಗಿನ ಕಾಯಿ ಒಡೆಯುವುದರ ಮೂಲಕ ಗುದ್ದಲಿಪೂಜೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಶ್ಯಾಮಪ್ರಸಾದ ಎಂ ಆರ್, ಶ್ರೀ ಮಣಿಕಂಠ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಸುಳ್ಯ ಹಾಗೂ ದೇವರಕಾನ ವಾರ್ಡಿನ ಸದಸ್ಯರಾದ ಶ್ರೀಮತಿ ಶರ್ಮಿಳಾ ಚೀಮುಳ್ಳು, ಶ್ರೀಮತಿ ಶಶಿಕಲಾ ಕುಳ್ಳಂಪ್ಪಾಡಿ ,ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಎಡಮಲೆ ಹಾಗೂ ಬೂತ್ ಅಧ್ಯಕ್ಷರಾದ ಶ್ರೀಎಲ್ಯಣ್ಣ ಗೌಡ ಕುಳ್ಳಂಪ್ಪಾಡಿ, ಕಾರ್ಯದರ್ಶೀ ಸಂಪ್ರಿತ್ ಮಿತ್ತಮೂಲೆ , ಶುಂಠಿತ್ತಡ್ಕ ನಾರಯಣ ಗೌಡ, ಗಣೇಶ್ ಕುಳ್ಳಂಪ್ಪಾಡಿ, ಗಂಗಾಧರ ಬಿರ್ಮುಕಜೆ, ದಿನೇಶ್ ಬಿರ್ಮುಕಜೆ, ಗುರುಪ್ರಸಾದ್ ಎಡಮಲೆ, ನೀಲಪ್ಪ ಗೌಡ ಕುಳ್ಳಂಪ್ಪಾಡಿ, ರಮೇಶ ಮಿತ್ತಮೂಲೆ, ರಾಘವ ಕುಳ್ಳಂಪ್ಪಾಡಿ ,ಲೋಲಾಕ್ಷ ಕುಳ್ಳಂಪ್ಪಾಡಿ ,ದೇವಿಪ್ರಸಾದ್ ಶುಂಠಿತ್ತಡ್ಕ, ಗಯಾನ್ ಎಡಮಲೆ,ಸಚಿನ್ ಕುಳ್ಳಂಪ್ಪಾಡಿ,ಮಿಥುನ್ ಶುಂಠಿತ್ತಡ್ಕ, ಚನಿಯಪ್ಪ ಕುಳ್ಳಂಪ್ಪಾಡಿ,ಬಾಬು ಕುಳ್ಳಂಪ್ಪಾಡಿ,ವಸಂತ ನೂಜಾಲು,ರೇವತಿ ಕುಳ್ಳಂಪ್ಪಾಡಿ,ಪ್ರಸನ್ನ ಭಟ್ ಕಾವಿನಮೂಲೆ, ಪ್ರಸಾಧ್ ಕೂರ್ಮಕೋಡಿ, ಆಶೋಕ ಕುಳ್ಳಂಪ್ಪಾಡಿ, ಪುಟ್ಟಣ್ಣ ಕುಳ್ಳಂಪ್ಪಾಡಿ, ಪ್ರಭಾಕರ ಕುತ್ಯಾಡಿ, ಊರಿನ ಪ್ರಮುಖರು ಹಾಗೂ ಗುತ್ತಿಗೆದಾರರು ಭಾಗವಹಿಸಿದ್ದರು. ಕಲ್ಲೋಣಿ-ಕುಳ್ಳಂಪ್ಪಾಡಿ ಶುಂಠಿತ್ತಡ್ಕ ರಸ್ತೆಯ ಕಾಂಕ್ರೀಟಿಕರಣ ಮತ್ತು ಮೋರಿ ನಿರ್ಮಾಣ ಕಾಮಗಾರಿಗೆ 33,77,000.00, ಎಡಮಲೆ- ಆನೆಮಲೆ ಸಾರ್ವಜನಿಕ ರಸ್ತೆಯ ಆನೆಮಲೆ ಎಂಬಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ 3,00,000.00, ದೇವರಕಾನ-ಬಿರ್ಮುಕಜೆ ಸಾರ್ವಜನಿಕ ರಸ್ತೆಯ ಬಿರ್ಮುಕಜೆ ಎಂಬಲ್ಲಿ ರಸ್ತೆ ಕಾಂಕ್ರೀಕರಣಕ್ಕೆ 3,28,000.00, ಕುಳ್ಳಂಪ್ಪಾಡಿ ಪ.ಜಾತಿ ಕಾಲೋನಿ ಬಳಿ ಕೊಳವೆ ಬಾವಿ ನಿರ್ಮಾಣಕ್ಕೆ ರೂ1,86,000.00 ಅನುದಾನ ಮೀಸಲಾಗಿದೆ.
- Tuesday
- January 28th, 2025