Ad Widget

ರಾಜ್ಯದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಹೆಸರು ಜೋಡಣೆ ವಿರುದ್ದ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ.

ನಾಯಿ ಬೀಲವನ್ನು ಅಲ್ಲಾಡಿಸಬೇಕು ಹೊರತು ಬೀಲ ನಾಯಿಯನ್ನು ಅಲ್ಲಾಡಿಸಬಾರದು – ಸುಬೋದ್ ಶೆಟ್ಟಿ ಮೇನಾಲ.

. . . . . . . . .

ರಾಜ್ಯ ಸಿದ್ದರಾಮಯ್ಯ ಸರಕಾರ ರೈತ ಹಾಗೂ ಹಿಂದು ವಿರೋಧಿ ಧೋರಣೆ ಮಾಡುತ್ತಿದೆ – ವೆಂಕಟ್ ವಳಲಂಬೆ .

. . . . . . .

ಭಾಗ್ಯಗಳಿಗಾಗಿ ಮೊದಲು ಎಸ್ಸಿ ,ಎಸ್ಟಿ ಹಣ ಬಳಕೆ ಇದೀಗ ರೈತರ ಜಮೀನು ಸರಕಾರಿ ಜಮೀನು ಮೇಲೆ ಕಣ್ಣು – ಭಾಗೀರಥಿ ಮುರುಳ್ಯ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೈತರಿಗೆ ವಕ್ಸ್ ಮಂಡಳಿಯು ನೋಟೀಸು ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು ಅದರ ಪ್ರಕಾರ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಏನೆಲ್ಲ ಅನಾಹುತಗಳು ಆಗುತ್ತಿದೆ ಎನ್ನುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆರಂಭದಲ್ಲಿ ದಲಿತರ ಹಣವನ್ನು ಈ ಸರಕಾರ ಲೂಟಿ ಹೊಡೆಯಿತು. ಆ ಬಳಿಕ ಎಸ್‌ಟಿ ನಿಗಮದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಬಳಕೆ ಮಾಡುವಂತ ದುಸ್ಥಿತಿ ಸರಕಾರಕ್ಕೆ ಬಂದಿದೆ. ಇದೀಗ ಮತ್ತೆ ಜನರಿಗೆ ದೊಡ್ಡ ಹೊಡೆತ ಸರಕಾರ ನೀಡುತ್ತಿದ್ದು ತಾವು ಕೃಷಿ ಮಾಡಿಕೊಂಡು ಬರುತ್ತಿರುವ ಜಮೀನನ್ನು ವಕ್ಸ್ ಆಸ್ತಿ ಎಂದು ನೋಟೀಸು ನೀಡುತ್ತಿದೆ. ಇದರ ವಿರುದ್ದ ಎಲ್ಲರೂ ಧ್ವನಿ ಎತ್ತಬೇಕಾದ ಅನಿರ್ವಾಯತೆ ಇದೆ. ಇಂದು ನಾವು ಹೋರಾಟ ಮಾಡದೇ ಇದ್ದರೆ ನಮ್ಮ ಜಾಗಕ್ಕೂ ಕುತ್ತು ಬರಬಹುದು. ಆದ್ದರಿಂದ ಈ ಕಾನೂನು ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಾವು ರಾಜ್ಯದ ರೈತರ ಪರ ನಿಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಆದರೆ ಇಂದು ಆ ಗ್ಯಾರಂಟಿ ಯೋಜನೆಗಳು ಜನರಿಗೆ ಸಿಗುತ್ತಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸರಕಾರ ಜನರ ಭೂಮಿಯನ್ನು ವಕ್ಸ್ ಆಸ್ತಿ ಎಂದು ಹೇಳಿ ನೋಟೀಸು ನೀಡುತ್ತಿದೆ. ಜನರನ್ನು ಬೀದಿಯಲ್ಲಿ ನಿಲ್ಲಿಸುವ ಕೆಲಸವನ್ನು ಈ ದುಷ್ಟ ಸರಕಾರ ಮಾಡುತ್ತಿದೆ. ಸರಕಾರದ ಈ ಷಡ್ಯಂತ್ರದ ವಿರುದ್ಧ ಬಿಜೆಪಿ ಹೋರಾಟ ಮಾಡಿ ಜನರ ಪರ ನಿಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ರಾಜ್ಯದಲ್ಲಿ ಚುನಾಯಿತ ಸರಕಾರ ಅಧಿಕಾರದಲ್ಲಿದೆಯೋ ಅಥವಾ ವಕ್ಸ್ ಸರಕಾರ ಅಧಿಕಾರದಲ್ಲಿದೆಯೋ ಎಂಬ ಸಂಶಯ ನಮಗೆ ಮೂಡುತ್ತಿದೆ. ಇದೀಗ ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ವಕ್ಸ್‌ ಮಂಡಳಿ ನೋಟೀಸು ನೀಡಿರುವ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ನಮ್ಮ ಅಜ್ಜಾವರ ಗ್ರಾಮದ ಮೇನಾಲದಲ್ಲಿಯೂ ಕೂಡಾ ನಮ್ಮ ಕುಟುಂಬಕ್ಕೆ ಸೇರಿದ ಜಾಗ ಕಬಳಿಕೆಗೆ ವಕ್ಸ್ ನೊಟೀಸು ಆಗಿತ್ತು. ಆದರೆ ನಾವು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ಆ ಜಮೀನು ಹಾಗೇ ಉಳಿದಿದೆ. ಈಗ ರೈತರು ಒಗ್ಗಟ್ಟಾಗಿ
ಜಾಗ ಕಬಳಿಕೆಗೆ ವಕ್ಸ್ ನೊಟೀಸು ಆಗಿತ್ತು. ಆದರೆ ನಾವು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ಆ ಜಮೀನು ಹಾಗೇ ಉಳಿದಿದೆ. ಈಗ ರೈತರು ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ನಾವೆಲ್ಲರೂ ಭುಮಿ ಕಳೆದುಕೊಳ್ಳುವ ಸ್ಥಿತಿ ಬರಬಹುದು ಅಲ್ಲದೇ ನಾಯಿಯು ಬಾಲವನ್ನು ಅಲ್ಲಾಡಿಸಬೇಕು ಹೊರತು ಬಾಲವು ನಾಯಿಯನ್ನು ಅಲ್ಲಾಡಿಸಬಾರದು ಎಂದು ವ್ಯಂಗ್ಯವಾಗಿ ಹೇಳಿದರು.

ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾ‌ರ್ ಕಂದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ವಕ್ಸ್‌ ಮಂಡಳಿ ನೋಟೀಸು ನೀಡುತ್ತಿರುವುದು ರೈತರ ಪಾಲಿಗೆ ಕರಾಳ ದಿನ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ. ಈ ದುಷ್ಟ ಸರಕಾರ ಹೋಗುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ. ಕುಸುಮಾಧರ ಸ್ವಾಗತಿಸಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ವಂದಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಮೂಲಕ ಬಿಜೆಪಿ ಪ್ರಮುಖರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷರುಗಳಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪ್ರಮುಖರಾದ ವಿಜಯ ಕುಮಾರ್ ಮುಳುಗಾಡು, ಶಶಿಕಲ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಬಾಲಕೃಷ್ಣ ರೈ ದುಗಲಡ್ಕ, ಬುದ್ಧ ನಾಯ್ಕ, ಸುಧಾಕರ ಕುರುಂಜಿಭಾಗ್, ಪುಷ್ಪಾ ಮೇದಪ್ಪ, ಸರೋಜಿನಿ ಪೆಲತಡ್ಕ, ಸೋಮನಾಥ ಪೂಜಾರಿ, ಜಿ.ಜಿ. ನಾಯಕ್, ವಿಕ್ರಂ ಅಪ್ಪಂಗಾಯ, ಸುನಿಲ್ ಕೇರ್ಪಳ, ವಿನಯ ಕುಮಾ‌ರ್ ಚಾರ್ಮತ, ದಯಾನಂದ ಕೇರ್ಪಳ, ಕಿಟ್ಟಣ್ಣ ರೈ ಮೇನಾಲ, ಚಂದ್ರಶೇಖರ ಕೇರ್ಪಳ, ಮಹೇಶ್ ಮೇರ್ಕಜೆ, ಅವಿನಾಶ್ ಕುರುಂಜಿ, ಶಾಂತಾರಾಮ ಕಣಿಲೆಗುಂಡಿ, ಗುಣವತಿ ಕೊಲ್ಲಂತಡ್ಕ, ಚಂದ್ರಶೇಖರ ರಾವ್ ಕೇರ್ಪಳ, ಶೀನಪ್ಪ ಬಯಂಬು, ರಮೇಶ್ ಇರಂತಮಜಲು, ಕಿರಣ ಕುರುಂಜಿ, ಪವಿತ್ರ ಕುರುಂಜಿ, ಭಾರತಿ ಉಳುವಾರು, ಶಂಕರ ಪೆರಾಜೆ, ನಯನ ರೈ ಮೇನಾಲ, ರಮೇಶ್ ಇರಂತಮಜಲು, ಹರೀಶ್ ಬೂಡುಪನ್ನೆ, ರಾಮಕೃಷ್ಣ ರೈ ಪೇರಾಲುಗುತ್ತು, ಸೀತಾನಂದ ಬೇರ್ಪಡ್ಕ, ನಿಖೇಶ್ ಉಬರಡ್ಕ, ಗುರುಸ್ವಾಮಿ ಬೀರಮಂಗಲ, ನಾರಾಯಣ ಎಂ.ಎಸ್., ಅಶೋಕ್‌ ಅಡ್ಕಾರು, ಶಿವಾನಂದ ಕುಕ್ಕುಂಬಳ, ಜಯಪ್ರಕಾಶ್ ಕುಂಚಡ್ಯ ಶ್ರೀನಾಥ ರೈ ಬಾಳಿಲ, ಮೋಹನ ಕೇರ್ಪಳ, ಜಿನ್ನಪ್ಪ ಪೂಜಾರಿ, ಶಿವರಾಮ ಕೇರ್ಪಳ, ಜಗನ್ನಾಥ ಜಯನಗರ, ಭಗೀರಥ ಕೋಲ್ಟಾರು,ಕಿಶನ್‌ ಜಬಳೆ, ಲೋಕೇಶ್ ಕೆರೆಮೂಲೆ, ಮಹೇಶ್ ಮೇನಾಲ, ಕೇಶವ ಸಿ.ಎ., ಶ್ರೀನಿವಾಸ ರಾವ್ ಹಳೆಗೇಟು, ಶ್ಯಾಮ್ ಪಾನತ್ತಿಲ, ವಾಸುದೇವ ಪುತ್ತಿಲ, ಪ್ರಭೋದ್ ಶೆಟ್ಟಿ ಮೇನಾಲ, ಮುರುಳೀಧರ ಮೇನಾಲ, ಚಂದ್ರಜಿತ್ ಮಾವಂಜಿ, ರಾಜೇಶ್ ಶೆಟ್ಟಿ ಮೇನಾಲ, ದೇವರಾಜ್ ಕುದ್ರಾಜೆ, ಶಿವನಾಥ್ ರಾವ್ ಹಳೆಗೇಟು, ಗಂಗಾಧರ ಮಾವಂಜಿ, ಗೋವಿಂದ ಅಳವುಪಾರೆ, ಕೃಷ್ಣಯ್ಯ ಮೂಲೆತೋಟ, ಜಯರಾಜ್ ಕುಕ್ಕೆಟ್ಟಿ, ರಾಕೇಶ್ ಮೆಟ್ಟಿನಡ್ಕ, ನವೀನ್ ಎಲಿಮಲೆ, ಸೋಮಶೇಖರ ಪೈಕ, ಹರಿಪ್ರಸಾದ್ ಎಲಿಮಲೆ, ವರ್ಷಿತ್ ಚೊಕ್ಕಾಡಿ , ಜ್ಞಾನಾನಂದ ಚಿಮ್ಮಿಕಲ್ಲು, ರಂಜಿತ್ ಎನ್‌.ಆ‌ರ್., ಸುರೇಶ್ ಕಣೆಮರಡ್ಕ, ಉಪೇಂದ್ರ ನಾಯ್ಕ, ಐತ್ತಪ್ಪ ನಾಯ್ಕ, ಸುದರ್ಶನ ಪಾತಿಕಲ್ಲು, ಅಬ್ದುಲ್ ಕುಂಞ ನೇಲ್ಯಡ್ಕ, ತಾರನಾಥ ಕೊಡೆಂಜಿಕಾ‌ರ್, ದೇವದಾಸ್‌ ಕುಕ್ಕುಡೇಲು, ಜನಾರ್ದನ ಬರೆಮೇಲು, ಚಂದ್ರಶೇಖರ ನಡುಮನೆ, ಚಂದ್ರಶೇಖರ ಪನ್ನೆ, ಪ್ರದೀಪ್ ಕಣಕ್ಕೂಡು, ಚನಿಯ ಕಲ್ತಡ್ಕ, ಅನೂಪ್ ಬಿಳಿಮಲೆ, ಹೇಮಂತ್ ಮಠ ಮೊದಲಾದವರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading