ಸುಳ್ಯ ಗೌಡ ಮಹಿಳಾ ಘಟಕದ ವತಿಯಿಂದಲೂ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ
ಸುಳ್ಯ, ದೀಪಾವಳಿ ಹಬ್ಬ ಆಚರಣೆ ತುಳುನಾಡಿನಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತ ಬಂದಿದೆ. ಹಿಂದಿನ ಸಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಇಂದಿಗೂ ಗ್ರಾಮೀಣ ಭಾಗದಲ್ಲಿ ಆಚರಿಸಲಾಗುತ್ತದೆ. ಗೋಪೂಜೆ, ಬಲಿಯೇಂದ್ರ ಪೂಜೆ ಮೊದಲಾದವು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ.
ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಬಲಿಯೇಂದ್ರ ಪೂಜೆಯೂ ಪ್ರಕೃತಿ ಆರಾಧನೆಯ ಒಂದು ಭಾಗ. ಕೃಷಿ ಬೆಳೆ ರಕ್ಷಣೆಯ ಉದ್ದೇಶದಿಂದ ಬಲಿಯೇಂದ್ರ ಪೂಜೆ ನೆರವೇರಿಸಲಾಗುತ್ತದೆ ಎಂಬುದು ಹಿರಿಯರ ಮಾತು. ದೀಪಾವಳಿಯ ಗೋಪೂಜೆಯ ದಿನದಂದು ಬಲಿಯೇಂದ್ರ ಪೂಜೆ ನಡೆಸಲಾಗುತ್ತದೆ.
ಗೌಡ ಮಹಿಳ ಸಮಿತಿ ಸುಳ್ಯವು ಈ ಬಾರಿ ಬಲಿಯೇಂದ್ರ ಅಲಂಕಾರ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು ಅದರ ಭಾಗವಾಗಿ ಮೊದಲೇ ತಿಳಿಸಿದ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ನ.2 ರಂದು ಚಾಲನೆ ನೀಡಲಾಗಯಿತು.
ಹಿಂದಿನ ಕಾಲದಲ್ಲಿ ಬಲಿಯೇಂದ್ರ ಪೂಜೆ (ಮರ ಹಾಕುವುದು) ಹೆಚ್ಚಿನ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಪ್ರತೀ ಮನೆಗಳಲ್ಲಿ ಕಾಣಬಹುದಾಗಿದ್ದ ಬಲಿಯೇಂದ್ರ ಪೂಜೆ ಇಂದು ತರವಾಡು ಮನೆ, ದೈವಸ್ಥಾನ, ದೇವಸ್ಥಾನಗಳಲ್ಲಿ ಮಾತ್ರವೇ ಕಾಣುವಂತಾಗಿದ್ದು, ಬಲಿಯೇಂದ್ರ ಆಚರಣೆಗಳೂ ಕಡಿಮೆ ಆಗ ತೊಡಗಿದೆ ಎನ್ನುತ್ತಾರೆ ಹಿರಿಯರು. ಬಲಿಯೇಂದ್ರ ಪೂಜೆಯನ್ನು ಮೂಲ ಸಂಪ್ರದಾಯದಂತೆ ಆಚರಿಸಿಕೊಂಡು ಬರಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸುಳ್ಯ ಗ್ರಾಮೀಣ ಭಾಗದಲ್ಲಿ ಈ ಬಾರಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಎಂಬುದನ್ನು ಕಾಣಬಹುದಾಗಿದೆ.
ಸುಳ್ಯದಲ್ಲಿ ಮೊದಲ ಬಾರಿಗೆ ಗೌಡ ಮಹಿಳ ಘಟಕವು ಯುವ ಗೌಡ ಘಟಕದ ಜೊತೆ ಸೇರಿಕೊಂಡು ತರುಣ ಘಟಕದ ನೆರವಿನೊಂದಿಗೆ ಯಾರ ಮನೆಗಳಲ್ಲಿ ಬಲಿಯೇಂದ್ರ ಮರ ಹಾಕುತ್ತಾರೆಯೋ ಅಂತಹವರು ಸ್ಪರ್ಧೆಗೆ ಹೆಸರು ನೊಂದಾಯಿಸುತ್ತಾರೆ. ಬಲಿಯೇಂದ್ರ ಪೂಜೆ ನಡೆಯುವ ದಿನ ಸ್ಪರ್ಧೆ ಆಯೋಜನೆಯ ತೀರ್ಪುಗಾರರ ತಂಡ ಬಲಿಯೇಂದ್ರ ಮರ ಹಾಕಿದ(ಅಲಂಕಾರ) ಮನೆಗಳಿಗೆ ತೆರಳಿ ವೀಕ್ಷಣೆ ನಡೆಸಿ, ಮೂಲ ಸಂಪ್ರದಾಯ, ಅಲಂಕಾರ, ವಿಶೇಷತೆ ಇವುಗಳ ಆಧಾರದ ಮೇಲೆ ಅಂಕ ನೀಡಿ ವಿಜೇತರ ಆಯ್ಕೆ ಮಾಡುತ್ತಾರೆ.
ಬಲಿಯೇಂದ್ರ ಮರವನ್ನು ಮೂಲ ಸಂಪ್ರದಾಯದಂತೆ ಹಾಕಲಾಗುತ್ತದೆ. ಬಲಿಯೇಂದ್ರ ಮರಕ್ಕೆ ಮೂಲ ಸಂಪ್ರದಾಯದಂತೆ ಅಲಂಕಾರ ಮಾಡಲಾಗಿ ಪೂಜೆ ಸಲ್ಲಿಸಲಾಗುತ್ತದೆ. ಪ್ರಕೃತಿಯಲ್ಲಿ ಸಿಗುವ ಸಾಂಪ್ರದಾಯಿಕ ವಸ್ತುಗಳನ್ನು ಮಾತ್ರವೇ ಬಳಸಿ ಬಲಿಯೇಂದ್ರ ರಚಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು ಮತ್ತಿತರ ಷರತ್ತುಗಳು ಸ್ಪರ್ಧೆಯಲ್ಲಿದ್ದು ವೀಕ್ಷಣೆ ಕಾರ್ಯಕ್ರಮಕ್ಕೆ ಶಿರಾಜೆ ಕಟ್ಟೆಮನೆ ತರವಾಡು ಮನೆಯಲ್ಲಿ ಚಾಲನೆ ನೀಡಲಾಯಿತು ನಿರಂತರವಾಗಿ ಎರಡು ದಿನಗಳ ಕಾಲ ಬಲಿಯೇಂದ್ರ ಮೂಲ ಅಲಂಕಾರ ಸ್ಪರ್ಧೆಯಲ್ಲಿ ಹೆಸರು ನೋಂದಣಿ ಮಾಡಿದ ಮನೆಗಳಿಗೆ ತೆರಳಿ ವೀಕ್ಷಣೆ ನಡೆಸಲಿದ್ದು ಬಹುಮಾನ ವಿಜೇತರಿಗೆ ದಿನಾಂಕ 9 ರಂದು ಬೃಹತ್ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಲಿದ್ದಾರೆ ಭೇಟಿಯ ತಂಡದಲ್ಲಿ ಮಹಿಳ ಗೌಡ ಘಟಕದ ಅಧ್ಯಕ್ಷರಾದ ವಿನುತ ಪಾತಿಕಲ್ಲು , ಸುರೇಶ್ ಅಮೈ , ಲೋಕೇಶ್ ಕೆರೆಮೂಲೆ , ಸುಪ್ರಿತ್ ಮೋಂಟಡ್ಕ , ವಿಕಾಸ್ ಮೀನಗದ್ದೆ , ಪ್ರೀತಂ ಮೀನಗದ್ದೆ , ತರುಣ ಘಟಕದ ಅಧ್ಯಕ್ಷ ಪ್ರೀತಂ ಡಿ.ಕೆ, ಜಯಲಕ್ಷ್ಮಿ ನಾರ್ಕೊಡು. ಶಿರಾಜೆ ಕಟ್ಟೆಮನೆಯ ಕೂಸಪ್ಪ ಗೌಡ , ದಾಮೋದರ ಶಿರಾಜೆ , ಪುರುಷೋತ್ತಮ ಶಿರಾಜೆ ,ಶಶಿಧರ ಶಿರಾಜೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.