Ad Widget

ಐನೆಕಿದು : ನವಗ್ರಾಮ ದಲ್ಲಿ ಲಯನ್ಸ್ ಕ್ಲಬ್ ವತಿಯಿಂದ “ಲಯನ್ ತುಡರ್” ದೀಪಾವಳಿ ಆಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.01 ರಂದು ಐನೆಕಿದು ನವಗ್ರಾಮ ದಲ್ಲಿ “ಲಯನ್ ತುಡರ್” ದೀಪಾವಳಿ ಆಚರಣೆ ನಡೆಯಿತು.
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಜೇಶ್.ಎನ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಝೋನ್ 2ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ಲ| ರಾಜೇಶ್ ಎನ್.ಎಸ್, ಲ| ರಾಮಚಂದ್ರ ಪಳಂಗಾಯ, ಲ| ಡಾ. ಶಿವಕುಮಾರ್ ಹೊಸೊಳಿಕೆ, ಲ| ಹಿಮ್ಮತ್ ಕೆ.ಸಿ ಹಾಗೂ ಊರಿನವರಾದ ಚಿನ್ನಮ್ಮ ನವಗ್ರಾಮ ಹಾಗೂ ಲಯನ್ಸ್ ಕ್ಲಬ್ ಖಜಾಂಜಿ ಲ| ಮೋಹನ್ ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಾವಳಿಯನ್ನು ಪಟಾಕಿ, ಸಿಹಿತಿಂಡಿ ಹಾಗೂ ಭೋಜನದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾಯೋಜಕರು ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಊರಿನ 95 ಜನರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ| ಕೃಷ್ಣಕುಮಾರ್ ಬಾಳುಗೋಡು ಧನ್ಯವಾದ ಸಮರ್ಪಣೆ ಮಾಡಿದರು.
ಲ| ಸತೀಶ್ ಕೂಜುಗೋಡು, ಲ| ರೇಗನ್.ಎಸ್.ಪಿ, ಲ| ಮಿಥುನ್ ಕೂಜುಗೋಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading