Ad Widget

ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಸರಕಾರಿ ಪದವಿಪೂರ್ವ ಕಾಲೇಜು ಪಂಜ 2012-13ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳು ನಡೆಸಿಕೊಂಡು ಬರುವ ಸ್ನೇಹ ಸಮ್ಮಿಲನ ಕಾರ್ಯಕ್ರಮ ದಿನಾಂಕ 27/10/2024 ರಂದು ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರು ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಆದಂತಹ ಶ್ರೀ ಚಂದ್ರಶೇಖರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಆದಂತಹ ಶ್ರೀಮತಿ ಶ್ರೀ ದೇವಿ ಭಟ್ , ಗುರುರಾಜ್ ಭಟ್, Dr. ಮನೋಜ್, ದಾನಿಗಳಾದ ಸತ್ಯನಾರಾಯಣ ಭಟ್, ವ್ಯವಸ್ಥಾಪಕರಾದ ಶ್ರೀಮತಿ ವೀರಮ್ಮ ಮತ್ತು ಶ್ರೀ ಕೈಲಾಸ್, ಸ್ನೇಹ ಸಮ್ಮಿಲನ ತಂಡದಿಂದ ಶ್ರೀ ಸುಮಂತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೇಮಲತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಅಥಿತಿ ಗನ್ಯರನ್ನು ಸೀಮಾರವರು ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದುಕ್ತ ಚಾಲನೆ ನೀಡಿ ಅತಿಥಿಗಳ ಭಾಷಣ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.ವನವಾಸಿ ವಿದ್ಯಾರ್ಥಿಗಳಿಗೆ ಸ್ನೇಹ ಸಮ್ಮಿಲನ ತಂಡ ದ ವತಿಯಿಂದ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ನಿರೂಪಣೆ ಯನ್ನು ಜುಸೈನ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಕಾರ್ಯಕ್ರಮವನ್ನು ಪ್ರವೀಣ್ ರವರು ನೆರವೇರಿಸಿಕೊಟ್ಟರು. ಸ್ನೇಹ ಸಮ್ಮಿಲನ ತಂಡ ಪಂಜ ಇದರ ಸದಸ್ಯರಾದ ಲತೀಶ್,ರಾಜೇಶ್, ನೆಮಿರಾಜ್, ಪ್ರಶಾಂತ,ರಕ್ಷಿತ್ , ನವೀನ್,ದಿವ್ಯಾ,ಪವಿತ್ರ ಆಚಾರ್ಯ, ಗೀತಾಂಜಲಿ,ಪವಿತ್ರ,ಅನಿತಾ,ಸುರಯ್ಯ,ರಮ್ಯಾ,ಮೂಕಾಂಬಿಕ, ಇವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading