ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಗೊಳ್ಳಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕಿ ಕೆ ಸರಸ್ವತಿ ಯವರಿಗೆ ವಿದಾಯ ಸಮಾರಂಭ ಹಾಗೂ ಸಮುದಾಯದತ್ತ ಶಾಲಾ ಕರ‍್ಯಕ್ರಮ ನ ೨೯ರಂದು ಅರಂತೋಡಿನಲ್ಲಿ ನಡೆಯಿತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ ವಹಿಸಿದರು. ಈ ಸಂರ‍್ಭದಲ್ಲಿ ನಿವೃತಗೊಳ್ಳಲಿರುವ ಸರಸ್ವತಿ ಮತ್ತು ಚಿದಾನಂದ ದಂಪತಿ ಕೊಡುಗೆಯಾಗಿ ನೀಡಿದ ದೀಪ ವನ್ನೂ ಹಸ್ತಾಂತರಿಸಿದರು..ಕರ‍್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರತಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ನಿವೃತ್ತ ಶಿಕ್ಷಕಿ ಸರಸ್ವತಿ ಯವರನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶು ಪಾಲರಾದ ಕೆ.ಆರ್.ಗಂಗಾಧರ . ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಇದರ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು ಅಭಿನಂದನ ಭಾಷಣ ಮಾಡಿದರು. ಸಮಾರಂಭದಲ್ಲಿ,ಸುಳ್ಯ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಗ್ರಾಮ ಪಂಚಾಯತ್ ಸದಸ್ಯರಾದ ಶಿವನಂದ ಕುಕ್ಕುಂಬಳ, ಮಾಲಿನಿ ವಿನೋದ್ ,ಪುಷ್ಪಾಧರ ಕೊಡಕೆರಿ, ಶ್ವೇತ ಅರಮನೆ ಗಾಯ,ಮಮತಾ,ಧನಲಕ್ಷ್ಮಿ,ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಯು.ಕೆ.ಚಿದಾನಂದ ಆಡ್ತಲೇ ಹಿರಿಯ ವಿದ್ಯರ‍್ಥಿ ಸಂಘ ದ ಅಧ್ಯಕ್ಷ ಸತೀಶ್ ನಾಯ್ಕ್,ನಿವೃತ್ತ ಉಪನ್ಯಾಸಕ ಅಬ್ದುಲ್ ಮಾಸ್ತರ್, ಅಭಿನಂದನ ಸಮಿತಿ ಅಧ್ಯಕ್ಷ ತರ‍್ಥರಾಮ ಅಡ್ಕಬಳೆ,ಅನ್ವರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್ ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು.ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿ ಶಿಕ್ಷಕಿ ಭಾನುಮತಿ ಕರ‍್ಯಕ್ರಮ ನಿರೂಪಿಸಿದರು.
- Sunday
- November 24th, 2024