ಕರ್ನಾಟಕ ಸರಕಾರದ ಸಚಿವರುಗಳ ಸಹಿತ ಅಧಿಕಾರಿಗಳ ದಂಡು ಆಗಮನ.
ಸಾಂಸ್ಕೃತಿಕ ಹಾಗೂ ಆಚರಣೆಗಳ ಅನಾವರಣ , ಬೃಹತ್ ಕಾಲ್ನಾಡಿಗೆ ಜಾಥಾ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಸುಮಾರು 10 ಸಾವಿರ ತಮಿಳು ಭಾಂದವರ ಸಮ್ಮಿಲನ ಸ್ವರ್ಣ ಮಹೋತ್ಸವ ಅದ್ದೂರಿ ಕಾರ್ಯಕ್ರಮ ನವಂಬರ್ 10 ರಂದು ಸುಳ್ಯದ ಜಾನಕಿ ವೆಂಕಟರಮಣ ಸಭಾ ಭವನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಕರ್ಷಕ ಕಾಲ್ನಡಿಗೆ ಜಾಥಾ ದೊಂದಿಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಶಿವ ಕುಮಾರ್ ಎಸ್ ಹಾಗೂ ಶಂಕರ್ ಲಿಂಗಂ ಕೆ ‘ಕಳೆದ 50 ವರ್ಷಗಳಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (KFDC) ರಬ್ಬರ್ ತೋಟಗಳಲ್ಲಿ ದುಡಿಯುವ ಮೂಲಕ ಬದುಕಿನ ಆಸರೆ ಕಂಡುಕೊಂಡಿರುವ ನಮ್ಮ ತಮಿಳು ಸಮುದಾಯವು ಅತ್ಯಂತ ಹಿಂದುಳಿದ ಸಮಾಜವಾಗಿದೆ.
18-19 ನೇ ಶತಮಾನದಲ್ಲಿ ಬ್ರಿಟಿಷರ ಆಸೆ ಆಮಿಷಗಳಿಗೆ ಬಲಿಯಾಗಿ ಶ್ರೀಲಂಕಾಕ್ಕೆ ಉದ್ಯೋಗ ನಿಮಿಮಿತ್ತ ಭಾರತದಿಂದ ತೆರಳಿದ ತಮಿಳು ಜನಾಂಗವನ್ನು ಬ್ರಿಟಿಷರು ಅತ್ಯಂತ ಕೀಳಾಗಿ, ಜೀತದಾಳುಗಳಂತೆ ನಡೆಸಿಕೊಂಡರು. ಸ್ಥಾತಂತ್ರ್ಯದ ಬಳಿಕವೂ ಶ್ರೀಲಂಕಾ ಸರಕಾರ ನಮ್ಮ ಜನಾಂಗಕ್ಕೆ ಪೌರತ್ತವನ್ನು ನೀಡದೆ ಹಾಗೂ ನಮ್ಮವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದರ ಪರಿಣಾಮವಾಗಿ ನಮ್ಮ ಸಮುದಾಯವು ಭಾರತಕ್ಕೆ ಮರಳುವ ಪರಿಸ್ಥಿತಿ ಉದ್ಭವವಾಯಿತು.
ಆ ಬಳಿಕ ಭಾರತ- ಶ್ರೀಲಂಕಾ ಸರಕಾರಗಳ ಒಪ್ಪಂದದಂತೆ ಭಾರತಕ್ಕೆ ಮರಳಿ ಬಂದ ನಮ್ಮ ಸಮುದಾಯವು ಭಾರತದ ವಿವಿಧಡೆ ಪುನರ್ವಸತಿಯನ್ನು ಕಂಡುಕೊಂಡಿತು.
ಹೀಗೆ ತಾಯ್ಯಾಡಿಗೆ ಮರಳಿ ಬಂದು 50 ವರ್ಷಗಳು ಸಂದಿವೆ. ಸಮುದಾಯದ ಸುಮಾರು 5% ರಿಂದ 10% ಜನರು ಮಾತ್ರ ರಬ್ಬರ್ ಕೆಲಸವನ್ನು ಬಿಟ್ಟು ವಿದ್ಯಾಭ್ಯಾಸ ಪಡೆದು ಸರಕಾರಿ, ಖಾಸಗಿ ಉದ್ಯೋಗಗಳಲ್ಲಿ ನಿರತರಾಗಿ ಜೀವನ ನಡೆಸುತ್ತಿದ್ದಾರೆ. ಸಮುದಾಯದ ಉಳಿದ ಜನರು ಜೀವನೋಪಾಯಕ್ಕಾಗಿ ರಬ್ಬರ್ ನಿಗಮವನ್ನು ನಂಬಿದ್ದು, ಜೀವನ ಸ್ವರದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳೇನೂ ಕಂಡಿಲ್ಲ. ಹಲವಾರು ಕಾರ್ಮಿಕ ಸಂಘಟನೆಗಳು, ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಸಮುದಾಯದ ಹೇಳಿಗೆಗಾಗಿ ದುಡಿಯುತ್ತಿವೆ.
ನಮ್ಮ ಸಮುದಾಯದ ಅಸ್ತಿತ್ವವನ್ನು ತೋರ್ಪಡಿಸುವ ನೆಲೆಯಲ್ಲಿ ಹಾಗೂ ಸರಕಾರಕ್ಕೆ ನಮ್ಮ ಕಷ್ಟ-ನಷ್ಟಗಳನ್ನು, ಜೀವನ ಸ್ತರವನ್ನು ಮನವರಿಕೆ ಮಾಡಲು ಅರ್ಥಪೂರ್ಣ ಸುವರ್ಣ ಮಹೋತ್ಸವ ಆಚರಣೆ ಅನಿವಾರ್ಯವಾಗಿದೆ. ಹಿಂದುಳಿದಿರುವ ನಮ್ಮ ಸಮುದಾಯವನ್ನು ಮುನ್ನೆಲೆಗೆ ತರುವಲ್ಲಿ ಈ ಸುವರ್ಣ ಮಹೋತ್ಸವ ಆಚರಣೆ ಮೊದಲ ಹೆಜ್ಜೆಯಾಗಿ ಇರಲಿದೆ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ ಎಂದು ತಿಳಿಸಿದರು.
ಈ ಬಗ್ಗೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಸಮಾಜ ಬಾಂಧವರೆಲ್ಲರ ಒಗ್ಗೂಡುವಿಕೆಯಲ್ಲಿ ತಮಿಳು ಬಾಂಧವರ ಸುವರ್ಣ ಮಹೋತ್ಸವ ಸಮಿತಿ ರಚಿಸಿದ್ದೇವೆ.
ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸುವ ನೆಲೆಯಲ್ಲಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಸಾಂಸ್ಕೃತಿಕ ಸ್ಪರ್ಧೆಗಳು ಸುವರ್ಣ ಮಹೋತ್ಸವ ಪೂರ್ವಭಾವಿಯಾಗಿ ಅಕ್ಟೋರ್ 2 ರಂದು ಅಮೃತ ಭವನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕ್ರೀಡಾಕೂಟ ನಡೆಸಲಾಗಿದ್ದು, ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿ ಗೊಳಿಸಿದ್ದಾರೆ ಎಂದರು.
ನ.10 ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7.30ರಿಂದ ಸುಳ್ಯದ ಜ್ಯೋತಿ ಸರ್ಕಲ್‌ನಿಂದ ಜಾನಕಿ ವೆಂಕಟ್ರಮಣ ಸಭಾಭವನ, ಪರಿವಾರಕಾನದ ವರೆಗೆ ನಮ್ಮ ಸಮುದಾಯದ ಕಲೆ- ಸಂಸ್ಕೃತಿಯನ್ನು ಬಿಂಬಿಸುವ ಅರ್ಥಪೂರ್ಣವಾದ ವೈಭವದ ಮೆರವಣಿಗೆ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ತಮಿಳು ಬಾಂಧವರ ಬೃಹತ್ ಸಮಾವೇಶ ನಡೆಯಲಿದ್ದು, ಸುಳ್ಯ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ, ಸುಳ್ಯ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಕರ್ನಾಟಕ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ :
ವಸತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರು ಈಶ್ವರ್ ಖಂಡ್ರೆ, ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ಬ್ರಿಜೇಶ್ ಚೌಟ, ಮಾಜಿ IAS ಅಧಿಕಾರಿ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಸಂಸದ ಸಸಿ ಕಾಂತ್ ಸೆಂದಿಲ್, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಬ್ಯಾಡಗಿ ವಿಧಾನಸಭಾ ಶಾಸಕರು ಬಸವರಾಜ ನೀಲಪ್ಪ ಶಿವಣ್ಣವರ್, ಶಾಸಕರು ಬ್ಯಾಡಗಿ ವಿಧಾನಸಭಾ ಕ್ಷೇತ್ರ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮಾಜಿ ಸಚಿವರು ಬಿ ರಾಮನಾಥ್ ರೈ, ಚೇರ್ಮನ್ ರೆಪ್ಪೋ ಬ್ಯಾಂಕ್ ಲಿಮಿಟೆಡ್ ನ ಇ ಸದಾನಂದ, ಚೇರಮನ್ ರೆಪ್ಪೋ ಹೋಂ ಫೈನಾನ್ಸ್ ಲಿಮಿಟೆಡ್ ನ ಚೇರ್ಮೆನ್ ಸಿ ತಂಗರಾಜ್,ವ್ಯಾಮೇಜ್ ಮ್ಯಾನೇಜಿಂಗ್ ಡೈರೆಕ್ಟರ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಿ.ಸಿ.ಜಯರಾಮ್,ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರು ವೆಂಕಟ್ ವಳಲಂಬೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಧೀರ್ ಕುಮಾರ್ ಶೆಟ್ಟಿ, ಬಿ ಜೆ ಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ, ಹಾಗೂ ಮುಖಂಡರುಗಳಾದ ಎಂ ವೆಂಕಪ್ಪ ಗೌಡ, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಘಟನೆ ವತಿಯಿಂದ ಸಾಮಾಜಿಕ ಕ್ಷೇತ್ರದ ನೆನಪಿಗಾಗಿ ಆಂಬ್ಯುಲೆನ್ಸ್ ಹಾಗೂ ಫ್ರೀಜರ್ ಸೇವೆ ಲೋಕಾರ್ಪಣೆ ನಡೆಯಲಿದ್ದು ಇದರ ಉದ್ಘಾಟನಾ ಸಮಾರಂಭದಲ್ಲಿ ರಪ್ಪೋ ಬ್ಯಾಂಕ್, ರೆಸ್ಕೋ ಹೋಮ್ ಫೈನಾನ್ಸ್ ಅವರ ವತಿಯಿಂದ ನೀಡಲಾಗುವ ಆಂಬ್ಯುಲೆನ್ಸ್ ಸೇವೆ ಹಾಗೂ ಫ್ರೀಜರ್ ಸೇವೆಗಳನ್ನು ಹಾಗೂ ಫಲಾನಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ನಡೆಯಲಿದೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಮಿಳು ಬಾಂಧವರ ಸುವರ್ಣ ಮಹೋತ್ಸವ 2024 ಅಧ್ಯಕ್ಷ ಕುಮಾರೇಶ್ವರನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೈ ಕೋರ್ಟ್ ನ ಹಿರಿಯ ನ್ಯಾಯ ವಾಧಿಗಳು ಹಾಗೂ ವಿವಿಧ ಗಣ್ಯರುಗಳು ಭಾಗವಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ರಾಮಸ್ವಾಮಿ ಆನಂದ,ಕೆ ತಂಗವೇಲು ನಾಗಪಟ್ನ, ಸಂದ್ಯಾ ಗೂ,ಶ್ರೀಮತಿ ಕೃಷ್ಣ ವೇಣಿ, ರಾಜಾ ಕೃಷ್ಣ ಕಡಬ, ಜೀವ ರತ್ನ ನಾಗಪಟ್ಟಣ, ಶ್ರೀಮತಿ ಅಂಬಿಕಾ ಕುಕ್ಕಂದೂರು,ಆಂಟನಿ ರಾಜ್ ಮಂಗಳೂರು ಉಪಸ್ಥಿತರಿದ್ದರು.