ವರದಿ: ಮಿಥುನ್ ಕರ್ಲಪ್ಪಾಡಿ.
ದೇಶಾದ್ಯಂತ ಬಾಂಗ್ಲಾ ಹಾಗೂ ಪಾಪಿ ಪಾಕಿಸ್ತಾನದ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿ ಕಾನೂನುಬಾಹಿರ ಚಟುವಟಿಕೆ, ಬೇಹುಗಾರಿಕೆ ಸೇರಿದಂತೆ ದುಷ್ಕೃತ್ಯಗಳನ್ನು ಎಸಗಿ ಪರಾರಿ ಆಗುತ್ತಿದ್ದು ಇವುಗಳನ್ನು ಕೇಂದ್ರ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸುತ್ತಿದ್ದು ಇದೀಗ ಕರಾವಳಿಯಲ್ಲಿಯು ಮೀನುಗಾರಿಕಾ ಬೋಟ್ ಗಳಲ್ಲಿ ಬಾಂಗ್ಲ ವಲಸಿಗರನ್ನು ಗುರುತಿಸಿ ಬಂಧಿಸಲಾಗಿದೆ ಇವೆಲ್ಲದರ ಮಧ್ಯೆ ಸುಳ್ಯ ತಾಲೂಕಿನ ಪ್ರತಿ ಗ್ರಾಮಗಳಲ್ಲಿಯು ಪಶ್ಚಿಮ ಬಂಗಾಳದ ಮೂಲದವರು ಎಂದು ಹೇಳುತ್ತಾ ಕೆಲ ಕಾರ್ಮಿಕರು ಯಾವುದೇ ದಾಖಲೆಗಳು ಇಲ್ಲದೆ ಸಂಚಾರ ನಡೆಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮನೆ ಮನೆ ವ್ಯಾಪಾರವನ್ನು ಕೂಡ ಹೆಚ್ಚಾಗಿ ಮಾಡುತ್ತಿದ್ದು ಅವರು ಯಾರು ಮತ್ತು ತಮ್ಮ ಬಳಿ ಯಾವುದಾದರು ದಾಖಲೆಗಳು ಇವೆಯೇ ಎಂದು ಪರಿಶೀಲನೆ ನಡೆಸಲು ಈ ಹಿಂದೆ ಗ್ರಾಮಕ್ಕೆ ಬೀಟ್ ಪೋಲಿಸ್ ಸಿಬ್ಬಂದಿ ಬರುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಕ್ರಮ ಕಡಿಮೆಯಾಗಿದೆ. ಕೆಲ ವಲಸಿಗರು ಬಟ್ಟೆ ಇನ್ನಿತರ ವಸ್ತು ಮಾರಾಟ ನೆಪದಲ್ಲಿ ಕೇವಲ ನಾಲ್ಕು ತುಂಡು ಬಟ್ಟೆಗಳನ್ನು ಹಿಡಿದು ಬಂದು ಮಾರಾಟ ಆರಂಭಿಸುತ್ತಾರೆ. ಇವರನ್ನು ತಪಾಸಣೆ ಮಾಡುವವರು ಯಾರು ಮತ್ತು ಅಷ್ಟು ದೂರದಿಂದ ಬಂದು ಇಲ್ಲಿ ಮಾರಾಟ ಮಾಡಿದರೆ ಅವರಿಗೆ ಸಿಗುವುದಾದರೂ ಏನು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿದ್ದು ಇನ್ನಾದರು ಪೋಲಿಸ್ ಇಲಾಖೆಯು ಬೀಟ್ ಗಳನ್ನು ಪುನರ್ ಸ್ಥಾಪಿಸಿ ಗ್ರಾಮಗಳಲ್ಲಿ ದಿನದಲ್ಲಿ ಒಂದು ಬಾರಿಯಾದರೂ ಭೇಟಿ ನೀಡುವಂತಾಗಬೇಕು. ಭೇಟಿ ನೀಡುವ ಪೋಲೀಸರ ಬಗ್ಗೆ ಗ್ರಾ.ಪಂ ಗಳಲ್ಲಿ ದೂರವಾಣಿ ಸಂಖ್ಯೆ ಸಹಿತವಾಗಿ ನೀಡುತ್ತಿದ್ದರು ಆದರೆ ಇದೀಗ ಈ ಯಾವುದೇ ವ್ಯವಸ್ಥೆಗಳು ಇಲ್ಲದೇ ಜನರು ಯಾರಿಗೆ ತಿಳಿಸಬೇಕು ಎಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಪರಿಚಿತರನ್ನು ಅಲ್ಲದೇ ನಾಗರಿಕರು ವಿಚಾರಣೆ ನಡೆಸಿದಲ್ಲಿ ಮೋರಲ್ ಪೋಲಿಸ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದ್ದು ಇದು ಕೂಡ ಇನ್ನೊಂದು ಸಮಸ್ಯೆಯಾಗಿದೆ ಎಂದು ಜನತೆ ಹೇಳುತ್ತಿದ್ದಾರೆ. ಇವೆಲ್ಲದಕ್ಕೂ ಬೀಟ್ ಪೋಲಿಸರು ಗ್ರಾಮಗಳಿಗೆ ಭೇಟಿ ನೀಡಲು ಪ್ರಾರಂಭಿಸಿದರೆ ಅಲ್ಲಿ ನಿವೃತ್ತ ಪೋಲಿಸ್ , ದೇಶ ಕಾಯುತ್ತಿದ್ದ ಅಪ್ಪಟ ದೇಶ ಪ್ರೇಮಿ ನಿವೃತ್ತ ಸೈನಿಕರು , ನಿವೃತ್ತ ಸರಕಾರಿ ಅಧಿಕಾರಿಗಳು , ಖಾಸಗಿ ವಲಯದ ಕೆಲಸಗಾರರು , ಪ್ರಾರ್ಥನಾ ಮಂದಿರದ ಪದಾಧಿಕಾರಿಗಳು ಹೀಗೆ ಎಲ್ಲರನ್ನು ಒಳಗೊಂಡು ಗ್ರಾಮಗಳಲ್ಲಿ ಸಭೆಗಳು ಮತ್ತು ಅರಿವು ಮೂಡಿಸಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗಬಹುದು ಎಂದು ಜನತೆ ಪೋಲಿಸ್ ಇಲಾಖೆಗೆ ಆಗ್ರಹಿಸುತ್ತಿದ್ದಾರೆ.
ಇಡೀ ದೇಶವನ್ನು ಗಡಿಯಲ್ಲಿ ಯೋಧರು ತಮ್ಮ ಜೀವ ಜೀವನ ಎರಡನ್ನು ಮರೆತು ದೇಶಕ್ಕಾಗಿ ಕಾವಲು ಕಾಯುತ್ತಿದ್ದು ದೇಶದ ಒಳಗಿನ ಕಾವಲನ್ನು ಪೋಲಿಸ್ ಇಲಾಖೆ ಮಾಡುತ್ತಿದ್ದು ಗಡಿಯಲ್ಲಿ ಯಾವ ರೀತಿಯಲ್ಲಿ ಭದ್ರತೆ ನೀಡಲಾಗುತ್ತಿದೆ ಅದೇ ಮಾದರಿಯಲ್ಲಿ ಪೋಲಿಸ್ ಇಲಾಖೆಯು ದೇಶ , ರಾಜ್ಯ , ಜಿಲ್ಲೆ , ತಾಲೂಕು , ಗ್ರಾಮಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿದೆ. ಯಾವುದೇ ದಾಖಲೆಗಳು ಇಲ್ಲದೇ ಮನೆ ಮನೆಗೆ ವಸ್ತುಗಳ ಮಾರಾಟ ನಡೆಸುವವರ ಹಿನ್ನೆಲೆಯೇನು ಎಂಬುವುದನ್ನು ಪತ್ತೆ ಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ಪೋಲಿಸ್ ಅಧಿಕಾರಿಗಳು ಬೀಟ್ ಹೆಚ್ಚಿಸಿ ಗ್ರಾಮದ ಬೀಟ್ ಪೋಲಿಸರ ದೂರವಾಣಿ ಸಂಖ್ಯೆ ಸಹಿತ ಮಾಹಿತಿಯನ್ನು ಜನತೆಗೆ ನೀಡಿದಲ್ಲಿ ಸಹಕಾರಿಯಾಗುತ್ತದೆ. ದೇಶದ ಭದ್ರತೆಗಾಗಿ ಜಾತಿ ಮತಗಳನ್ನು ಮರೆತು ಜನತೆ ಒಂದಾಗಬೇಕು. ಈ ಬಗ್ಗೆ ಪೋಲೀಸ್ ಇಲಾಖೆ ಕೂಡ ಶೀಘ್ರವಾಗಿ ಗಮನ ಹರಿಸಬೇಕೆಂದು ನಿವೃತ್ತ ಸೈನಿಕರಾದ ಕಿರಣ್ ರೈ ಬಾಡೇಲು ಮೇನಾಲ ಒತ್ತಾಯಿಸಿದ್ದಾರೆ.
ಇಂತಹ ಯಾವುದೇ ಘಟನೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿಗಳು ಸಿಕ್ಕಿದಾಗ ಜನರು ನೇರವಾಗಿ 112 ಅಥವಾ ಹತ್ತಿರ ಪೋಲಿಸ್ ಠಾಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಲ್ಲದೇ ಯಥಾ ಪ್ರಕಾರವಾಗಿ ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆಗಳು ಜಾರಿಯಲ್ಲಿದ್ದು ಬೀಟ್ ತಂಡಗಳ ರಚನೆ ಮೂಲಕ ಬೀಟ್ ವ್ಯವಸ್ಥೆಗಳು ಆಗುತ್ತಿದೆ ಎಂದು ಎಸ್ ಪಿ ಯತೀಶ್ ಎನ್ ತಿಳಿಸಿದ್ದಾರೆ.