Ad Widget

ಅವನೊಬ್ಬ ಅನಾಮಿಕ, ಬದುಕಿನ ಕಷ್ಟ-ನೋವುಗಳಲ್ಲಿ ಮಿಂದೆದ್ದ ನಾವಿಕ…

ತನ್ನ ಮನದ ನೋವುಗಳ ಇತರರಿಂದ ಮುಚ್ಚಿಡುವ ಆ ವ್ಯಕ್ತಿಯು ತನ್ನ ಕನಸಿನಲ್ಲೂ ಕೂಡ ಕಣ್ಣೀರ ಸುರಿಸುವನು, ನಾಲ್ಕು ಜನರ ಮಧ್ಯೆ ಮಾತ್ರ ನಗುನಗುತ್ತಾ ಬದುಕುವನು…
ನಿದ್ರೆಯಿಲ್ಲದೇ ಅದೆಷ್ಟೋ ರಾತ್ರಿಗಳ ಕಳೆದಿರುವನು ಅವನು, ನಾಳೆಗಳ ಯೋಚನೆಯಲ್ಲಿ ಕೊರಗಿ ಕರಗಿರುವನು ಅವನು, ಏಕಾಂಗಿಯಾಗಿ ಅತ್ತು ತನ್ನ ಮನದ ನೋವುಗಳಿಗೆ ತಾನೇ ಔಷಧಿಯ ನೀಡುವನು ಅವನು…
ಎಲ್ಲರ ಮನಸ್ಸಿನ ನೋವುಗಳೇ ಅವನಲ್ಲೂ, ಎಲ್ಲರ ಬದುಕಿನ ಕಷ್ಟಗಳೇ ಅವನಲ್ಲೂ ವಿಶೇಷವೇನಿಲ್ಲ, ಆದರೂ ಅವನ ಬದುಕಿನ ಕಷ್ಟ-ನೋವುಗಳ ಅವನೇ ಅನುಭವಿಸುವನು ಹೇಳಿಕೊಳ್ಳದೇ ಯಾರಲ್ಲೂ…
ಸಾಮಾನ್ಯರಲ್ಲಿ ಸಾಮಾನ್ಯನು ಅವನು, ಪ್ರತಿದಿನವೂ-ಪ್ರತಿಕ್ಷಣವೂ ಕಷ್ಟ-ನೋವುಗಳಲ್ಲೇ ಬದುಕ ನಡೆಸುತ್ತಿರುವ ನಾವಿಕನು, ಅವನು ನಮ್ಮ-ನಿಮ್ಮೊಳಗೊಬ್ಬನು…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading