ಗುಂಡ್ಯ ಮಾರ್ಗವಾಗಿ ಬರುತ್ತಿದ್ದ ಬಸ್ಸಿನಲ್ಲಿ ಸುಳ್ಯದ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಜೊತೆಗೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ವರ್ಷಿತ್ ಚೊಕ್ಕಾಡಿ ಮತ್ತು ಮಿಥುನ್ ಎನ್ ಪಿ , ಶುಶ್ಮಿತ್ ಬೊಳ್ಳುರು ಇವರಿಗೆ ದಿನಾಂಕ 04-10-2024ರಂದು ಜಿಲ್ಲಾ ಸೆಸನ್ಸ್ ನ್ಯಾಯಾಲಯ ಪುತ್ತೂರಿನಲ್ಲಿ ಜಾಮಿನು ನೀಡಿದ್ದು ಇಂದು ನ್ಯಾಯಾಲಯದ ಆದೇಶದ ಮೇರೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ಮಂಗಳೂರು ಜಿಲ್ಲಾ ಕಾರಗ್ರಹಕ್ಕೆ ಆದೇಶ ಪ್ರತಿ ತಲುಪಿಸಿ ಇದೀಗ ಬಿಡುಗಡೆ ಗೊಂಡಿದ್ದಾರೆ . ಬಿಡುಗಡೆ ಗೊಂಡ ವರ್ಷಿತ್ ಚೊಕ್ಕಾಡಿ ಮತ್ತು ಮಿಥುನ್ ಎನ್ ಪಿ ಹಾಗೂ ಶುಸ್ಮಿತ್ ಬೊಳ್ಳೂರು ರವರನ್ನು ರಜತ್ ಅಡ್ಕಾರ್ , ನವೀನ್ ಎಲಿಮಲೆ , ರೂಪೇಶ್ ಪೂಜಾರಿಮನೆ, ಕೌಶಲ್ , ಹರ್ಪಿತ್ , ಲಿಕೇಶ್ , ನಿಕೇಶ್ ಉಬರಡ್ಕ , ರಾಧಕೃಷ್ಣ ಬೊಳ್ಲೂರು, ರಕ್ಷಿತ್ ಸೇರಿದಂತೆ ಇತರರು ಕೇಶರಿ ಶಾಲು ಹಾಕಿ ಸ್ವಾಗತಿಸಿದರು . ಆರೋಪಿತರ ಪರವಾಗಿ ಸುಳ್ಯ ನ್ಯಾಯಾಲಯದಲ್ಲಿ ಹರೀಶ್ ಬೂಡಪನ್ನೆ ವಕಾಲತ್ತು ವಹಿಸಿದ್ದರು.
- Thursday
- November 21st, 2024