“ತೆರೆದ ಮನೆ” ಕಾರ್ಯಕ್ರಮದಡಿಯಲ್ಲಿ, ಅಜ್ಜಾವರ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಳ್ಯ ಅಟ್ಲೂರು ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಂಡರು. ಸುಳ್ಯ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಗಳು ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಠಾಣಾ ಪರಿಚಯ ಹಾಗೂ ದೈನಂದಿನ ಕರ್ತವ್ಯಗಳ ಬಗ್ಗೆ ಮಾಹಿತಿ ಠಾಣಾ ಉಪನಿರೀಕ್ಷಕರಾದ ಸಂತೋಷ್ ಹಾಗೂ ಸರಸ್ವತಿ ರವರು ವಿದ್ಯಾರ್ಥಿಗಳಿಗೆ ಪೊಲೀಸರ ಕರ್ತವ್ಯ ಹಾಗೂ ಇಲಾಖೆಯ ಉನ್ನತಮಟ್ಟದ ಕಚೇರಿಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪೋಸ್ಕೋ ಕಾಯ್ದೆ,ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ,ಹೆಚ್ಚು ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಮಾದಕ ವಸ್ತು ಬಳಕೆಯಿಂದ ಬರುವ ದುಷ್ಪರಿಣಾಮ,ಮತ್ತು ಈ ಎಲ್ಲಾ ಕಾನೂನು ಭಾಹಿರ ಚಟುವಟಿಕೆಕೆ ಗಳಿಗೆ ಕಾನೂನು ನೀಡುವ ಶಿಕ್ಷೆಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಹಾಗೂ ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಲಕ ನಂದಿನಿ, ಶಿಕ್ಷಕವೃಂದದವರು ಉಪಸ್ಥಿತರಿದ್ದರು.
- Tuesday
- December 3rd, 2024