ದುಗ್ಗಲಡ್ಕ ಸಮೀಪದ ಕೆದ್ಕಾನ ಎಂಬಲ್ಲಿ ಸುಳ್ಯ ನಗರ ಪಂಚಾಯತ್ ಕಸ ವಿಲೇವಾರಿ ಘಟಕ ಮಾಡುವ ಪ್ರಸ್ತಾಪಕ್ಕೆ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ.
ಕೆದ್ಕಾನ, ಕೊಯಿಕುಳಿ, ಗೋಂಟಡ್ಕ, ಮಿತ್ತಮಜಲು, ಕುದ್ದಾಜೆ, ದುಗ್ಗಲಡ್ಕ ಪ್ರದೇಶದ ನಾಗರಿಕರು ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ವಠಾರದಲ್ಲಿ ಸಭೆ ಸೇರಿ ಯಾವುದೇ ಕಾರಣಕ್ಕೂ ನಗರದ ಕಸವನ್ನು ಕೆದ್ಯಾನ ಪ್ರದೇಶದಲ್ಲಿ ಹಾಕಲು ಬಿಡುವುದಿಲ್ಲ ಎಂದು ಒಮ್ಮತದಿಂದ ತೀರ್ಮಾನ ತೆಗೆದುಕೊಂಡರೆಂದು ತಿಳಿದುಬಂದಿದೆ.ಕಸ ವಿಲೇವಾರಿ ಪ್ರಕ್ರಿಯೆ ಮುಂದುವರಿದಲ್ಲಿ ಅದನ್ನು ತಡೆಗಟ್ಟಲು ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ.
ಅಧ್ಯಕ್ಷರಾಗಿ ಗಿರಿಧರ ಗೌಡ ಕೆದ್ಕಾನ, ಉಪಾಧ್ಯಕ್ಷರಾಗಿ ಶ್ರೀಧರ ಆಚಾರ್ಯ ಕೆದ್ಕಾನ, ಕಾರ್ಯದರ್ಶಿಯಾಗಿ ಶ್ಯಾಮ ಸುಂದರ್ ಮಿತ್ತಮಜಲು, ಜತೆ ಕಾರ್ಯದರ್ಶಿಯಾಗಿ ಸುಂದರ ಆಚಾರ್ಯ ಕೆದ್ಕಾನ ರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಮನ್ಮಥ ಗೌಡ ಕೆದ್ಕಾನ, ಹುಕ್ರಪ್ಪ ಕೆದ್ಮಾನ, ಆನಂದ ಕುದ್ರಾಜೆ, ಪ್ರಶಾಂತ್ ಮಿತ್ತಮಜಲು, ಶಿವಪ್ರಸಾದ್ ಕುದ್ಘಾಜೆ, ಯತೀಶ್ ರೈ ದುಗ್ಗಲಡ್ಕ, ಬಾಲಕೃಷ್ಣ ರೈ ದುಗ್ಗಲಡ್ಕ, ಕುಶ ನೀರಬಿದಿರೆ, ಲೋಹಿತ್ ಮಾಣಿಬೆಟ್ಟು,ಶಿವರಾಮ ಗೌಡ ಪಾನತ್ತಿಲ, ಸಂದೀಪ್ ರೈ ದುಗ್ಗಲಡ್ಕ, ಸತೀಶ್ ಕೆದ್ಯಾನ,ಅರುಣ್ ಆಚಾರ್ಯ ಕೆದ್ಮಾನ, ದೇವಪ್ಪ ಆಚಾರ್ಯ ಕೆದ್ಮಾನ, ಗಿರೀಶ್ ರೈ ಮೂಡೆಕಲ್ಲು, ಆನಂದ ಆಚಾರ್ಯ ಕೆದ್ಮಾನ,ಬಾಲಚಂದ್ರ ಗೌಡ ಕೆದ್ಮಾನ,ಮಾಧವ ಗೌಡ ದುಗ್ಗಲಡ್ಕ, ನಿರಂಜನ ದುಗ್ಗಲಡ್ಕ ದಿನೇಶ್ ಡಿ.ಕೆ,ದಯಾನಂದ ಸಾಲಿಯಾನ್, ಸುಂದರ ರಾವ್,ರಾಘವೇಂದ್ರ ಭಟ್ ಕಲ್ಲಂಬೆ,ಕಜೆ ಕುಶಾಲಪ್ಪ ಗೌಡ,ಶೇಖರ್ ಕುದ್ರಾಜೆ, ಲತೀಶ್ ಡಿ.ಎಸ್.,ನಾರಾಯಣ ಮಣಿಯಾಣಿ,ಸುಬ್ರಹ್ಮಣ್ಯ (ಮಣಿ)ಕುಂಬೆತ್ತಿಬನ, ರೂಪೇಶ್ ನೀರಬಿದಿರೆ, ಪ್ರಶಾಂತ್ ನಡುಬೆಟ್ಟು, ಕೇಶವ ನಾಯ್ಕನಡುಬೆಟ್ಟು,ಪ್ರದೀಪ್ ನಡುಬೆಟ್ಟು,ದೇವಪ್ಪ ಆಚಾರ್ಯ, ಸತೀಶ್ ಕೆ.ರನ್ನು ಆರಿಸಲಾಯಿತು.