Ad Widget

ಐವರ್ನಾಡಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ,ಮಧುಮೇಹ ತಪಾಸಣೆ,ಸಿ.ಪಿ.ಆ‌ರ್ ತರಬೇತಿ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಮ ಪಂಚಾಯತ್ ಐವರ್ನಾಡು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ವಾಹನ ಚಾಲಕ-ಮಾಲಕರ ಸಂಘ ಐವರ್ನಾಡು, ವರ್ತಕ ಸಂಘ ಐವರ್ನಾಡು ಇವರ ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ, ಮಧುಮೇಹ ತಪಾಸಣೆ, ಹೃದಯ ಸ್ಥಂಭನದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿ.ಪಿ.ಆ‌ರ್. ತರಬೇತಿ ಶಿಬಿರ ಸೆ.29 ರಂದು ನಡೆಯಿತು.

. . . . . . . . .

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಕಾರ್ಯಕ್ರಮ ಜನರಿಗೆ ಬಹಳಷ್ಟು ಪ್ರಯೋಜನ ಆಗುತ್ತದೆ. ಶಿಬಿರದಲ್ಲಿ ಯುವಕರು ಸಕ್ರೀಯರಾಗಿ ಭಾಗವಹಿಸುವ ಮುಖಾಂತರ ರೋಟರಿಯ ಯಶಸ್ವಿ ಕಾರ್ಯಕ್ರಮವಾಗುತ್ತದೆ ಎಂದು ಐವರ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್‌.ಮನ್ಮಥರವರು ಹೇಳಿದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ ವಹಿಸಿದ್ದರು. ವೇದಿಕೆಯಲ್ಲಿ ಕೆವಿಜಿ ಮೆಡಿಕಲ್‌ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ನ ಡಾ.ದಿನೇಶ್‌, ರೊ.ಸಹಾಯಕ ಗವರ್ನರ್ ವಿನಯ ಕುಮಾ‌ರ್,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ರಮ್ಯ,ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್, ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್‌ ಮಡ್ತಿಲ, ಅಧ್ಯಕ್ಷ ನವೀನ್‌ ಬಾಂಜಿಕೋಡಿ,ಗೆಳೆಯರ ಬಳಗ ದೇರಾಜೆ ಅಧ್ಯಕ್ಷ ಅರುಣ್‌ ಗುತ್ತಿಗಾರುಮೂಲೆ,ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ಕಟ್ಟತ್ತಾರು, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹೇಶ ಜಬಳೆ, ಕಾರ್ಯದರ್ಶಿ ಅನಿಲ್ ಕುತ್ಯಾಡಿ,ಮಿತ್ರ ಬಳಗ ಬಾಂಜಿಕೋಡಿ ಅಧ್ಯಕ್ಷ ಮಹಾಬಲ ಗುಂಪಕಲ್ಲು, ವರ್ತಕ ಸಂಘದ ಅಧ್ಯಕ್ಷ ನಿಖಿಲ್ ಮಡ್ತಿಲ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading