ಕೆ.ವಿ.ಜಿ. ಇಂಜಿನಿಯರಿoಗ್‌ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿoಗ್ ವಿಭಾಗದ ವಿದ್ಯಾರ್ಥಿಗಳು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸವು ದಿನಾಂಕ: 27-09-2024ರಂದು ಕೆ.ವಿ.ಜಿ.ಸಿ.ಇ. ಸಭಾಂಗಣದಲ್ಲಿ ನಡೆಯಿತು. ಎ.ಸಿ.ಸಿ.ಇ(ಐ) ಮಂಗಳೂರಿನ “ಟೆಕ್ನೋವೀಕ್ 2024” ಕಾರ್ಯಕ್ರಮದ ಅಡಿಯಲ್ಲಿ ಎ.ಸಿ.ಇ, ಸಿವಿಲ್ ಇಂಜಿನಿಯರಿoಗ್ ವಿಭಾಗ, ಕೆ.ವಿ.ಜಿ.ಸಿ.ಇ. ಇದರ ಸಹಯೋಗದಲ್ಲಿ ಸಿವಿಲ್ ಇಂಜಿನಿಯರ್‌ಡಾ. ಹೆಚ್. ಅಜಿತ್ ಹೆಬ್ಬಾರ್, ಇವರು “SustainableHorizons in Civil Engineering”ಎಂಬ ವಿಷಯದಲ್ಲಿಉಪನ್ಯಾಸ ನೀಡಿದರು ಹಾಗೂ ಸ್ಟ್ರಕ್ಚರಲ್ ಇಂಜಿನಿಯರ್ ಮತ್ತು ಎ.ಸಿ.ಸಿ.ಇ (ಐ) ಸದಸ್ಯರು, ಪುತ್ತೂರು ಸೆಂಟರ್‌ನ ಶ್ರೀಯುತ ಶಿವರಾಮ್ ಎಂ.ಎಸ್., ಪುತ್ತೂರು ಇವರು “Flaws in Construction Workmanship”ಎಂಬ ವಿಷಯದಲ್ಲಿಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇಂಜಿನಿಯರ್ ರವಿಶoಕರ್, ಎ.ಸಿ.ಸಿ.ಇ(ಐ), ಮಂಗಳೂರು ಸೆಂಟರ್ ಹಾಗೂ ಶ್ರೀಯುತ ಪ್ರಮೋದ್, ಕೆ.ವಿ.ಜಿ. ಪಾಲಿಟೆಕ್ನಿಕ್ ಅವರು ಭಾಗವಹಿಸಿದ್ದರು. ಸಿವಿಲ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಪಕರುಗಳಾದ ಪ್ರೊ. ಅರುಣ್‌ಕುಮಾರ್ ಹೆಚ್., ಡಾ. ಲೇಖ ಬಿ.ಎಂ.,ಸoಯೋಜಕರಾದ ಪ್ರೊ. ಅಜಿತ್ ಬಿ.ಟಿ ಮತ್ತು ಪ್ರೊ. ಕೃಷ್ಣರಾಜ್ ಎಂ.ವಿ. ಹಾಗೂ ಅಶ್ವಿಜ ಕೆ.ಸಿ., ಪ್ರೊ. ಲಕ್ಷ್ಮಿ ನಾರಾಯಣ ಎನ್. ಮತ್ತು ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿ ಪ್ರಿನ್ಸ್ಎಂ.ಎಕ್ಸ್. ಮತ್ತು ಸಂತೋಷ್ ಬಿ. ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.
- Friday
- November 1st, 2024