ಲಯನ್ಸ್ ಕ್ಲಬ್ ಗುತ್ತಿಗಾರು ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಸಹಯೋಗದಲ್ಲಿ ಸೆ.28 ಶನಿವಾರದಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ನಡೆಯಲಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾಗುವ ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಆಧಾರ್ ನೋಂದಣಿ ಮಾಡಿಸಲು ಮಗುವಿನ ಜನನ ಪ್ರಮಾಣಪತ್ರ, ಪೋಷಕರ ಆಧಾರ್ ಕಾರ್ಡ್ ಹಾಗೂ ಮಗುವಿನ ಜೊತೆಗೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು.
ಹೆಸರು ತಿದ್ದುಪಡಿ, ಜನ್ಮದಿನಾಂಕ ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ತಿದ್ದುಪಡಿಗಳಿದ್ದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಹಾಗೂ ಜನನ ಪ್ರಮಾಣಪತ್ರ ತೆಗೆದುಕೊಂಡು ಬರಬೇಕೆಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)
- Friday
- November 1st, 2024