ಸುಳ್ಯ : ಸುಳ್ಯ ಇಂಜಿನಿಯರಿಂಗ್ ಕಾಲೇಜ್ ವಿಧ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿತನಾದ ಅಬ್ದುಲ್ ನಿಯಾಝ್ ನನ್ನು ಸುಳ್ಯ ಪೋಲಿಸರು ಬಂಧಿಸಿ ಕರೆತಂದಿದ್ದಾರೆ .
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಬಳಿಕ ಅಲ್ಲಿಂದ ತೆರಳಿ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇದೀಗ ಈತನನ್ನು ಪೋಲಿಸ್ ಅಧಿಕಾರಿಗಳು ಬಂಧಿಸಿ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ದೂರಿನಲ್ಲಿರುವ ಅಂಶಗಳು.
ದಿನಾಂಕ 23.09.2024 ರಂದು ಬೆಳಿಗ್ಗೆ, 4.45 ರ ಸಮಯ ತನ್ನ ಮನೆಯಿಂದ ಹೊರಟು ಸುಳ್ಯಕ್ಕೆ ಬರುವ ಕೆಎಸ್ಆರ್ ಟಿಸಿ ಬಸ್ಸನ್ನು ಹತ್ತಿದ್ದು ಬಸ್ಸಿನಲಿ ಟಿಕೆಟು ಪಡೆದು ಸುಳ್ಯಕ್ಕೆ ಹೊರಟಿದ್ದ ಯುವತಿಯು. ಬಸ್ಸಿನ ಮಧ್ಯ ಭಾಗದಲ್ಲಿ ಕುಳಿತುಕೊಂಡಿದ್ದು ಸದ್ರಿ ಸೀಟಿನ ಒಂದು ಬದಿಯಲ್ಲಿ ಆರೋಪಿ ಅಬ್ದುಲ್ ನಿಯಾಜ್ ಕುಳಿತುಕೊಂಡಿರುತ್ತಾನೆ. ಯುವತಿಯು ಪ್ರಯಾಣಿಸುತ್ತಿದ್ದ ಬಸ್ಸು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿಗೆ ಸಮಯ ಸುಮಾರು 5.50 ರ ಹೊತ್ತಿಗೆ ತಲುಪಿದಾಗ ಆರೋಪಿಯು ತನ್ನ ಬ್ಯಾಗನ್ನು ತೆಗೆದು ದೂಡಿ ತನ್ನೊಂದಿಗೆ ಮಾತನಾಡಲು ಪ್ರಯತ್ನಿಸಿ, ಮೊಬೈಲ್ ನಂಬರನ್ನು ಕೇಳಿದ್ದ. ನಾನು ಮಾತನಾಡದೇ ಇದ್ದಾಗ ಆರೋಪಿ ಆತನ ಕಾಲನ್ನು ತಾಗಿಸಿ ತನ್ನ ಮೈಗೆ ಕೈ ಹಾಕಿ ತಬ್ಬಿ ಹಿಡಿದು ಮಾನಭಂಗಕ್ಕೆ ಪ್ರಯತ್ನಿಸಿರುತ್ತಾನೆ. ಆರೋಪಿಯ ಕಿರುಕುಳ ತಾಳಲಾರದೆ ಬೇರೆ ಸೀಟಿನಲಿ ಕುಳಿತು ಬಸ್ಸು ಸುಬ್ರಹ್ಮಣ್ಯ ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಬಸ್ಸಿನ ಚಾಲಕನಿಗೆ ದೂರನ್ನು ನೀಡಿದ್ದೇನೆ. ಬಸ್ಸಿನ ಚಾಲಕರು ವಿಚಾರಿಸಿದ ನಂತರ ಆರೋಪಿ ಬಸ್ಸು ನಿಲ್ದಾಣದಿಂದ ತೆರಳಿದ್ದ. ನಾನು ಅದೇ ಬಸ್ಸಿನಲ್ಲಿ ಸುಳ್ಯಕ್ಕೆ ಹೋಗಲು ಕುಳಿತುಕೊಂಡಿದ್ದಾಗ ಆರೋಪಿಯು ಪುನಃ ನಾನು ಕುಳಿತುಕೊಂಡಲ್ಲಿಗೆ ಬಂದು ನೀನು ನನ್ನ ವಿರುದ್ಧ ದೂರು ನೀಡಿದರೆ ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ, ನನ್ನಲ್ಲಿ ಜನ ಇದ್ದಾರೆ, ನಿನಗೆ ನಾನು ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದೆಲ್ಲಾ ಹೇಳುತ್ತಾ, ಜೀವ ಬೆದರಿಕೆಯೊಡ್ಡಿ, ಬಸ್ಸಿನಿಂದ ಇಳಿದು ಹೋಗಿರುತ್ತಾನೆ. ತನ್ನ ಮೈ ಕೈಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಇದೀಗ ಆರೋಪಿಯ ಬಂಧನವಾಗಿದೆ.