Ad Widget

ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಜಾ – ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

. . . . . .

ಮೈಸೂರಿನಲ್ಲಿ ಮೂಡ ಸೈಟ್ ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಅವರ ತನಿಖೆ ನಡೆಸಬೇಕೆಂದು ಖಾಸಗಿ ವ್ಯಕ್ತಿಗಳು ನೀಡಿದ ಅರ್ಜಿಯನ್ನು ರಾಜ್ಯಪಾಲರು ಪುರಸ್ಕರಿಸಿ ಅನುಮತಿ ನೀಡಲಾಗಿತ್ತು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ನ ಏಕ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಸ್ತೃತ ವಿಚಾರಣೆ ಬಳಿಕ ನ್ಯಾಯಾಲಯವು ರಾಜ್ಯಪಾಲರು ಅನುಮತಿ ನೀಡಿದ್ದು ಸರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅರ್ಜಿಯನ್ನು ವಜಾ ಗೋಳಿಸಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಾದರೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸುಳ್ಯದಲ್ಲಿ ನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು .

ಸುಳ್ಯ ಹಳೆ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯಲ್ಲಿ ಮಂಡಲ ಸಮಿತಿ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಅಲ್ಲದೇ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು ಕುರ್ಚಿ ಕಿತ್ತಾಟ ಶುರುವಾಗಿದೆ ಸಿದ್ದರಾಮಯ್ಯನವರು ದಲಿತಪರ ಎಂದುಕೊಂಡು ದಲಿತರಿಗೆ ವಂಚಿಸಲಾಗಿದೆ. ಅಭಿವೃದ್ಧಿ ಗೆ ಹಣ ಇಲ್ಲ. ಅಧಿಕಾರ ಪಡೆಯುವ, ದುಡ್ಡು ಮಾಡುವ ಲೆಕ್ಕಾಚಾರದಲ್ಲೆ ಇದ್ದಾರೆ ಅವರಿಗೆ ರಾಜ್ಯದ ಹಿತಾಸಕ್ತಿ ಇಲ್ಲ ಎಂದು ಹೇಳಿದರು. ಇದೀಗ ಅವರ ಹಿಂಬಾಲಕರು ಮೂಕವಾಗಿ ಬೆಂಬಲಿಸುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಕೊನೆಗೊಳ್ಳಬೇಕು ಎಂಬುದು ಜನರ ಒತ್ತಾಯ. ನೈತಿಕವಾದ ಹೊಣೆ ಗೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ಸರಕಾರದಿಂದ ರಾಜ್ಯದ ಪ್ರಗತಿ ಸಾಧ್ಯವಿಲ್ಲ. ಜನರಿಗೆ ಕೊಡುವುದರಲ್ಲಿ ಹತ್ತುಪಟ್ಟು ಅವರು ಪಡೆಯುತ್ತಿದ್ದಾರೆ ಅಷ್ಟೆ ಎಂದು ಆರೋಪಿಸಿದರು.

ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ ಮಾತನಾಡಿ ಬೇರೆಯವರು ಬೇರೆ ಕೇಸಲ್ಲಿ ಬಿದ್ದಾಗ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಿದ್ದರಾಮಯ್ಯರು ಈಗ ರಾಜೀನಾಮೇ ನೀಡಲು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. 14 ಸೈಟ್ ಗಳನ್ನು ಪಡೆದುಕೊಂಡು ನಾನು ಏನು ಮಾಡಿಲ್ಲ, ನಾನೇ ಪ್ರಾಮಾಣಿಕ ಎಂದು ಬಿಂಬಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರದಲ್ಲಿರುವ ನೈತಿಕತೆ ಇಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಗೆ ಹೋದರೂ ಹೊರಗೆ ಬರಲು ಸಾಧ್ಯವಿಲ್ಲ, ರಾಜೀನಾಮೆ ಕೊಡುವವರೆಗೆ ಗ್ರಾಮ ಗ್ರಾಮದಲ್ಲಿ ಹೋರಾಟ ನಡೆಸುತ್ತೇವೆ. ಅಲ್ಲದೇ ನಮ್ಮ ಹೋರಾಟ ನಿಲ್ಲುವುದಿಲ್ಲ ಆದ್ದರಿಂದ ತಕ್ಷಣಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಹರೀಶ್ ಬೂಡುಪನ್ನೆ , ನ.ಪಂ ಅಧ್ಯಕ್ಷೆ ಶಶಿಕಲಾ , ಅಶೋಕ್ ಅಡ್ಕಾರ್ , ಚನಿಯ ಕಲ್ತಡ್ಕ , ಬೂಡು ರಾಧಾಕೃಷ್ಣ ರೈ , ಸೋಮ ಶೇಖರ್ ಪೈಕ, ಜಗದೀಶ್ , ಬಾಲಗೋಪಾಲ್ , ರಮೇಶ್ ಇರಂತಮಜಲು , ನಾರಾಯಣ ಶಾಂತಿನಗರ , ಶೀಲಾ ಕುರುಂಜಿ , ಪಿ ಕೆ ಉಮೇಶ್ , ನ.ಪಂ ಉಪಾಧ್ಯಕ್ಷ ಬುದ್ದನಾಯ್ಕ್ , ಮಹೇಶ್ ರೈ ಮೇನಾಲ , ಶಂಕರ್ ಪೆರಾಜೆ, ಜಿನ್ನಪ್ಪ ಪೂಜಾರಿ , ಮಂಚಿ , ಸಿ ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ , ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಶಾಂತಿನಗರ ನಿರೂಪಿಸಿ, ಹೇಮಂತ್ ಕುಮಾರ್ ಕಂದಡ್ಕ ವಂದಿಸಿದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!