Ad Widget

ಪೆರುವಾಜೆಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

ಜೇಸಿಐ ಬೆಳ್ಳಾರೆಯ ಜೇಸೀ ಸಪ್ತಾಹದ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಪೆರುವಾಜೆಯಲ್ಲಿ ನಡೆಯಿತು. ಪೆರುವಾಜೆ ಶ್ರೀ ಜಾಲದುರ್ಗಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಆಂದೋಲನಕ್ಕೆ ದೇವಸ್ಥಾನದ ಆಡಳಿತಧಿಕಾರಿ ಮತ್ತು ಪೆರುವಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪೆರುವಾಜೆ ಡಾ. ಕೆ ಶಿವರಮ ಕಾರಂತ ಪದವಿ ಕಾಲೇಜಿನ ಪ್ರಾoಶುಪಾಲೆ ಜ್ಯೋತಿ ಎಸ್, ಶ್ರೀ ಕ್ಷೇತ್ರ ಧ.ಗ್ರಾ.ಯೋ(ರಿ) ಪೆರುವಾಜೆ ಒಕ್ಕೂಟದ ಅಧ್ಯಕ್ಷ ಸುಂದರ ನಾಯ್ಕ, ಲಯನ್ಸ್ ಕ್ಲಬ್ ಪೆರುವಾಜೆ ಜಲದುರ್ಗಾದ ನಿಕಟಪೂರ್ವಾಧ್ಯಕ್ಷ ವಿಠಲ ಶೆಟ್ಟಿ, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನ ನಿಕಟಪೂರ್ವಧ್ಯಕ್ಷ ಶಶಿಧರ್, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತರಿದ್ದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಪೆರುವಾಜೆಯಿಂದ ಮಾಸ್ತಿಕಟ್ಟೆಯವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪೆರುವಾಜೆ ಡಾ. ಕೆ ಶಿವರಮ ಕಾರಂತ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಬೆಳ್ಳಾರೆ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಜೇಸಿಐ ಸದಸ್ಯರು ಸ್ವಚ್ಛತೆಯಲ್ಲಿ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading