Ad Widget

ವಿದ್ಯಾರ್ಥಿವೇತನ,ವಿವಿಧ ಪ್ರಶಸ್ತಿ ಪುರಸ್ಕಾರ ಪ್ರದಾನದೊಂದಿಗೆ ಬೆಳ್ಳಾರೆ ಜೇಸಿ ಸಪ್ತಾಹ ಸಮಾರೋಪ

. . . . . . . . .

ವಿವಿಧ ಸಾರ್ವಜನಿಕ ಕಾರ್ಯಕ್ರಮ ಹಾಗೂ ತರಬೇತು ಕಾರ್ಯಕ್ರಮಗಳೊಂದಿಗೆ ನಡೆದ ಬೆಳ್ಳಾರೆ ಜೇಸಿಐನ ಜೇಸಿ ಸಪ್ತಾಹದ ಸಮಾರೋಪ ಸಮಾರಂಭ ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಿತು. ಸಮಾರಂಭದಲ್ಲಿ ದಿ. ಜೇಸಿ ಲೋಕೇಶ್ ಪೆರ್ಗಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 17 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಯುವ ಪುರಸ್ಕಾರವನ್ನು ಡಾ.ಕಿಶನ್ ರಾವ್ ಬಾಳಿಲ, ಪ್ರತಿಭಾ ಪುರಸ್ಕಾರವನ್ನು ಮಾ.ಕಿಶನ್ ದ್ರಾವಿಡ್, ಗೌರವ ಪುರಸ್ಕಾರವನ್ನು ಶ್ರೀ ವೆಂಕಟ ಕೃಷ್ಣ ರಾವ್ ಪೆರುವಾಜೆ ಇವರುಗಳಿಗೆ ನೀಡಿ ಗೌರವಿಸಲಾಯಿತು. ಈ ವರ್ಷದ ಕಮಲ ಪತ್ರ ಪುರಸ್ಕಾರವನ್ನು ಘಟಕದ ಪೂರ್ವಾಧ್ಯಕ್ಷ ಜೇಸಿ ಜಯರಾಮ್ ಉಮಿಕ್ಕಳ ಅವರಿಗೆ ನೀಡಿ ಗೌರವಿಸಲಾಯಿತು. ಶ್ರೀನಿವಾಸ ಮಠತ್ತಡ್ಕ ಅವರಿಗೆ ಧನಸಹಾಯ ವಿತರಿಸಲಾಯಿತು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರು ಪುರಂದರ್ ರೈ, ಗ್ರಾಮ ಪಂಚಾಯತ್ ಬೆಳ್ಳಾರೆಯ ಮಾಜಿ ಅಧ್ಯಕ್ಷ ಸುನಿಲ್ ರೈ ಪೆರುವಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಾಸುದೇವ ಪೆರುವಾಜೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ,ಬ್ರಿಜೇಶ್ ರೈ ಬೆಳ್ಳಾರೆ, ಪ್ರದೀಪ್ ಬೀಡು, ವೇದಿತ್ ರೈ, ಪುರುಷೋತ್ತಮ, ಲಿಂಗಪ್ಪ ಬೆಳ್ಳಾರೆ, ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading