
ಸುಬ್ರಹ್ಮಣ್ಯ ಸೆ. 23: ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಇರುವ ಮೋಂಟಿ ಕಂಫರ್ಟ್ಸ್ ನ ನೆಲ ಮಹಡಿಯಲ್ಲಿ ಇಂದು ನೂತನವಾಗಿ ಕಾರ್ತಿಕ್ ಸಸ್ಯಹಾರಿ ಉಪಹಾರ ಕೇಂದ್ರವು ಉದ್ಘಾಟನೆಗೊಂಡಿತು.
ಸುಬ್ರಹ್ಮಣ್ಯದ ಸಮಾಜ ಸೇವಕ ಡಾ.ರವಿ ಕಕ್ಕೆಪದವು ಅವರ ಮಾಲಕತ್ವದ ಈ ಉಪಹಾರ ಕೇಂದ್ರವನ್ನು ಸುಬ್ರಹ್ಮಣ್ಯ ರಾಘವೇಂದ್ರ ಹೋಟೆಲ್ ಮಾಲಕ ಯಜ್ಞೇಶ್ ಆಚಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಉಪಹಾರ ಕೇಂದ್ರದಲ್ಲಿ ಮಧ್ಯಾಹ್ನದ ಸಸ್ಯಹಾರಿ ಊಟ, ಗಂಜಿ ಊಟ, ರುಚಿಯಾದ ಕಾಫಿ ತಿಂಡಿ ಹಾಗೂ ಕೆಟರಿಂಗ್ ವ್ಯವಸ್ಥೆ ಇರುವುದಾಗಿ ಮಾಲಕರು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ರವಿ ಕಕ್ಕೆಪದವು ಅವರ ಧರ್ಮಪತ್ನಿ ಗೀತಾ ರವಿ ಕಕ್ಕೆ ಪದವು, ಅನುಗ್ರಹ ಎಜುಕೇಶನ್ ನ ಅಧ್ಯಕ್ಷ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್, ಕುಮಾರಸ್ವಾಮಿ ಶಾಲಾ ಸಂಚಾಲಕ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ರೋಟರಿ ಪೂರ್ವ ಸಹಾಯಕ ಗವರ್ನರ್ ಶಿವರಾಮ ಎನೆಕಲ್, ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ರೋಟರಿ ಪೂರ್ವ ಅಧ್ಯಕ್ಷ ರುಗಳಾದ ಉಮೇಶ ಕೆ ಎನ್, ಲೋಕೇಶ್ ಬಿ ಎನ್, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ, ಪುರೋಹಿತರಾದ ರಘುರಾಮ ಅಮ್ಮಣ್ಣಾಯ, ಉದ್ಯಮಿ ಗಿರಿಧರ ನಡುತೋಟ, ಜೆ ಸಿ ಪೂರ್ವಾಧ್ಯಕ್ಷ ಪ್ರಭಾಕರ ಪಡ್ರೆ, ಉದಯಕುಮಾರ್ ಕುಮಾರಧಾರ ಶೇಷಪ್ಪ ಗೌಡ ಕುಮಾರಧಾರ, ರಾಧಾಕೃಷ್ಣ, ಪುರುಷೋತ್ತಮ ಗೌಡ, ಸನತ್ ಚಂದ್ರಹಾಸ ಭಟ್, ದಿನೇಶ್ ಕುಕ್ಕೆ, ಶ್ರೀ ಮಾಧವ ದೇವರಗದ್ದೆ, ಪ್ರಕಾಶ್ ಸುಬ್ರಹ್ಮಣ್ಯ, ಜಗದೀಶ್ ಏನೆಕಲ್, ಜನಾರ್ದನ ಗೌಡ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.