ನಾವು ಮಾಡುವ ಕೆಲಸ ಯಾವುದಾದರೇನು ಅದರ ಮೇಲೆ ಪ್ರೀತಿಯಿರಲಿ, ಇಷ್ಟಪಟ್ಟ ಕೆಲಸ ಸಿಗಲಿಲ್ಲವೆಂದು ದುಃಖಿಸುವುದಾದರೂ ಏಕೆ..? ನಿರಂತರ ಪ್ರಯತ್ನವಿರಲಿ…
ಸಿಗದ ಕೆಲಸವ ನೆನೆದು ವ್ಯಥೆ ಪಡುವುದಾದರೂ ಏಕೆ..?, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬಾರದೇಕೇ…?
ಚಿಕ್ಕ ಕೆಲಸ-ದೊಡ್ಡ ಕೆಲಸ ಎಂಬುವುದು ಇಲ್ಲ, ಶ್ರದ್ಧೆಯಿಂದ ಮಾಡಿದರೆ ಯಾವ ಕೆಲಸವೂ ನಮ್ಮ ಕೈ ಬಿಡುವುದಿಲ್ಲ…
ಮಾಡುವ ಕೆಲಸದಿಂದ ಮನುಷ್ಯನನ್ನು ಗುರುತಿಸುವುದು ಸರಿಯಲ್ಲ, ಮನಸ್ಸಿನಲ್ಲಿ ಶ್ರದ್ಧೆಯಿದ್ದರೆ ಮಾಡುವ ಚಿಕ್ಕ ಕೆಲಸವೇ ವ್ಯಕ್ತಿಯನ್ನು ಭವಿಷ್ಯದಲ್ಲಿ ಎತ್ತರಕ್ಕೇರಿಸುವುದು ಸುಳ್ಳಲ್ಲ…
ಸ್ವಾರ್ಥದ ಈ ಪರಪಂಚದಲಿ ದೊಡ್ಡತನವ ತೋರುವವರೇ ಹೆಚ್ಚು, ಇತರರನ್ನು ನೋಡಿ ಹೀಯಾಳಿಸಿ ನಗುವುದೇ ಅವರಿಗಂಟಿದ ಹುಚ್ಚು…
ಹುಚ್ಚು ಹೆಚ್ಚಾದವರ ಚುಚ್ಚು ಮಾತುಗಳಿಗೆ ಕಿವಿಯನ್ನು ಕೊಡದೇ ನಮ್ಮ ಕೆಲಸವನ್ನು ಮಾಡೋಣ ನಾವು ಛಲವನ್ನು ಬಿಡದೇ…
ಕೆಲಸ ಯಾವುದಾದರೇನು ನಿರಂತರ ಶ್ರದ್ಧೆಯಿರಬೇಕು ಮನದಲ್ಲಿ, ಮನಸ್ಸಿಟ್ಟು ಮಾಡಿದ ಕೆಲಸ ಎಂದಿಗೂ ನಮ್ಮ ಕೈ ಬಿಡದು ಇಲ್ಲಿ…
✍️ಉಲ್ಲಾಸ್ ಕಜ್ಜೋಡಿ
- Tuesday
- December 3rd, 2024