ದಸರಾ ಉತ್ಸವ ವೈಭವದಿಂದ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದು, 9 ದಿನಗಳು ಕೂಡ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ಶಾರದೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದರು.
ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಸರ ಉತ್ಸವದ ವಿವರ ನೀಡಿದರು. ಈ ಬಾರಿ ವಿಶೇಷವಾಗಿ ಮಹಿಳೆಯರೇ ನಡೆಸಿಕೊಡುವ ವಿಶೇಷ ಕಾರ್ಯಕ್ರಮ ಮಹಿಳಾ ದಸರಾ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರೇ ತಯಾರಿಸಿದ ಖಾದ್ಯ ಹಾಗೂ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಮಿತಿ ವತಿಯಿಂದ ಉಚಿತ ಸ್ಟಾಲ್ ಗಳ ವಿತರಣೆ ಮಾಡುತ್ತೇವೆ. ಮಕ್ಕಳ ದಸರಾ ಕೂಡ ಈ ಬಾರಿಯ ವಿಶೇಷತೆಯಾಗಿದೆ. ಸೆ.9 ರಂದು ಜ್ಯೋತಿ ವೃತ್ತದಿಂದ ಮೆರವಣಿಗೆ ಮೂಲಕ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆಯಲಿದೆ. ನಂತರ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು ಇದಕ್ಕೆ ಕುಣಿತ ಭಜನಾ ತಂಡ ಸಾಥ್ ನೀಡಲಿದೆ. ಪ್ರತಿ ದಿನ ರಾತ್ರಿ ಹಾಗೂ ಮೂರು ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಈ ಬಾರಿ ಮಾಡಲಾಗಿದೆ. ಚಂಡಿಕಾ ಯಾಗ ನಡೆಯಲಿದ್ದು ಭಕ್ತ ಪಾಲ್ಗೊಳ್ಳುವಿಕೆಯೊಂದಿಗೆ ವಿಶಿಷ್ಠವಾಗಿ ಆಚರಣೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಗಾಂಧಿನಗರ ಶಾಲಾ ಮೈದಾನ, ಜ್ಯೋತಿಸರ್ಕಲ್ ವರೆಗೆ, ಎಪಿಎಂಸಿ ಆವರಣ, ಪ್ರಭು ಗ್ರೌಂಡ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದರು. .
ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ.ಮಾತನಾಡಿ ನಿಮ್ಮ ಮನೆಯ ದಸರಾ ಎಂದುಕೊಂಡು ಎಲ್ಲರೂ ಸಹಕಾರ ನೀಡಬೇಕೆಂದರು.
ಕೃಷ್ಣ ಕಾಮತ್ ಮಾತನಾಡಿ ಎಲ್ಲರ ಸಹಕಾರ ಯಾಚಿಸಿದರು. ಗೋಕುಲ್ ದಾಸ್ ಮಾತನಾಡಿ ಸೌಹಾರ್ದತೆ ಸಾರುವಂತಾಗಲಿ ಎಂದರು. ಮಹಿಳಾ ಸಮಿತಿ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದ್ದಾರೆ. ಈ ಅವಕಾಶವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ಮಾದರಿ ದಸರಾ ಆಗಲಿ ಎಂದರು.
ಗೋಷ್ಠಿಯಲ್ಲಿ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷರಾದ ನಾರಾಯಣ ಕೇಕಡ್ಕ, ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ., ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಮಹಿಳಾ ಸಮಿತಿ ಆಧ್ಯಕ್ಷೆ ಶಶಿಕಲಾ ನೀರಬಿದಿರೆ, ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಾರದಾಂಬಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ಅಶೋಕ್ ಪ್ರಭು, ಎಂ.ಕೆ. ಸತೀಶ್, ರಾಜು ಪಂಡಿತ್, ಸುನಿಲ್ ಕೇರ್ಪಳ, ಗಣೇಶ್ ಆಳ್ವ, ಸಂದೇಶ್ ಕುರುಂಜಿ, ಸತೀಶ್ ಕೆ.ಜಿ., ಸನತ್ ಪೆರಿಯಡ್ಕ, ರಂಜಿತ್ ಎನ್.ಆರ್., ಶಿವನಾಥ್ ರಾವ್, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಶ್ರೀದೇವಿ ನಾಗರಾಜ್ ಭಟ್ ಉಪಸ್ಥಿತರಿದ್ದರು.