ಕಲ್ಚರ್ಪೆ ಕಸ ದಿಂದ ರಸ ಸಿಗುತ್ತಿದೆ, ಕಲ್ಚರ್ಪೆ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದೆ ಕಲ್ಪರ್ಪೆ ಹೋರಾಟ ಸಮಿತಿಯ ಎಂಬ ಆರೋಪಕ್ಕೆ ವಿನಯ ಕುಮಾರ್ ಕಂದಡ್ಕ ಪ್ರತ್ಯುತ್ತರ ನೀಡಿದರು. ಉದ್ದೇಶ ಪೂರ್ವಕವಾಗಿಯೇ ನನ್ನ ವಿರುದ್ಧ ಇಬ್ಬರು ಹೇಳಿಕೆ ನೀಡಿದ್ದಾರೆ. ಅವರು ಮೂಲ ನಿವಾಸಿಗಳಲ್ಲ. ವಲಸೆ ನಿವಾಸಿಗರೇ ಈ ಸಮಸ್ಯೆ ಉಲ್ಬಣ ಆಗಲು ಕಾರಣ. ರಾಜಕೀಯ ಉದ್ದೇಶಕ್ಕೆ ಅವರು ಮಾಡಿದ್ದಾರೆ.
ನಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಅಲ್ಲಿನ ಜನರ ಸಮಸ್ಯೆಗಳಿಗೆ ಕರೆ ಬಂದ ಕೂಡಲೇ ಸ್ಪಂದಿಸಿದ್ದೇವೆ. ಹೊಸ ಅಧ್ಯಕ್ಷರು ಆಯ್ಕೆಯಾದಾಗ ನೆನಪಾದದ್ದು ಯಾಕೆ, ಆಡಳಿತಾಧಿಕಾರಿಗಳು ಇದ್ದಾಗ ಪಶ್ನೆ ಮಾಡದೇ ಈಗ ರಾಜಕೀಯ ಉದ್ದೇಶಕ್ಕೆ ಸಮಸ್ಯೆ ಮಾಡುತ್ತಿದ್ದಾರೆ. ಅಧಿಕಾರಿಗಳು ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ. ಅವರನ್ನು ಪ್ರಶೆ ಮಾಡಬೇಕಲ್ಲವೇ? ಎಂದರು.
ಕಸ ಹಾಕಿರುವುದನ್ನು ತಡೆಯಲು ಅವರು ಯಾರು ?
ಕಸ ಹಾಕುದನ್ನು ತಡೆಯಲು ಅವರು ಯಾರು, ನಾವೂ ಕಾನೂನು ಪ್ರಕಾರ ಕಸ ಹಾಕಲು ಗುರುತಿಸಿದ ಜಾಗ. ಅಧಿಕೃತವಾಗಿ ಮಂಜೂರಾಗಿರುವ ಜಾಗ ಇದು. ಅದನ್ನು ತಡೆಯಲು ಅಧಿಕಾರ ಅವರಿಲ್ಲ, 4 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗಿಂದ ಈಗ ಸುಧಾರಿಸಿದೆ. ಅರೋಪ ಮಾಡುವವರು ಇಲ್ಲ ಎಂದು ದೈವಸ್ಥಾನದಲ್ಲಿ ಹೇಳಲಿ, ಯಾರಿಂದಾದರೂ ನಾನು ಒಂದು ರೂಪಾಯಿ ಕಮಿಷನ್,ಲಂಚ ಪಡೆದಿದ್ದೇನೆ ಎಂದಾದರೇ ಅವರು ಕಲ್ಚರ್ಪೆ ವನದುರ್ಗಾ ದೈವಸ್ಥಾನದಲ್ಲಿ ಅವರು ಪ್ರಮಾಣ ಮಾಡಲಿ, ನಾನು ಬರುತ್ತೇನೆ ಎಂದರು. ಅಶೋಕ್ ಹಾಗೂ ಗೋಕುಲ್ ದಾಸ್ ಮಾತು ಕೇಳಬೇಡಿ ಎಂದು ಗ್ರಾ.ಪಂ.ಅಧ್ಯಕ್ಷ ಸುದೇಶ್ ರವರು ನನ್ನ ಬಳಿ ಹೇಳಿದ್ದಾರೆ ಎಂದರು. ಪಂಚಾಯತ್ ಗೇಟು ಕದ್ದಿದ್ದಾರೆ, ಬೆಂಕಿ ಹಾಕಿದ್ದಾರೆ ಆದರೂ ನಾವು ದೂರು ನೀಡಿಲ್ಲ. ಬೆಂಕಿ ಬೀಳುವ ಮೊದಲೇ ದಿನ ಅಶೋಕ್ ರವರು ಸಿಸಿ ಕ್ಯಾಮರಾ ತಿರುಗಿಸಿದ್ದಾರೆ. ನಾವು ಕಂಪ್ಲೆಂಟ್ ಮಾಡಬಹುದಿತ್ತು ಅಲ್ಲಿನ ಜನರ ಬಗ್ಗೆ ನಮಗೆ ಅಭಿಮಾನ ಇದೆ. ಆರೋಪ ಮಾಡುವ ಬದಲು ಕೋರ್ಟ್ ಗೆ ಹೋಗಿ ನಿಲ್ಲಿಸಲಿ, ಅದು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಅಲ್ಲಿ ಸಂಗ್ರಹವಾಗಿರುವ ಕಸವನ್ನು ಕೂಡ ತೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ. ಕಸ ತೆರವು ಮಾಡುವ ಬಗ್ಗೆ 92 ಲಕ್ಷ ರೂ. ಎಸ್ಟಿಮೇಟ್ ಆಗಿದೆ. ಇವರು ರಸ್ತೆ ಬಂದ್ ಮಾಡುವುದು, ಪೌರ ಕಾರ್ಮಿಕರಿಗೆ ಬೆದರಿಕೆ ಹಾಕುವುದು, ನಕ್ಸಲಿಸಂ ದಾರಿ ಬಿಟ್ಟು ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಲಿ ಎಂದರು.
ಗೋಕುಲ್ ದಾಸ್ ರವರು ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ರಥಬೀದಿ ಸಮೀಪ ಖಾಸಗಿಯವರ ಜಾಗದಲ್ಲಿ ಹಾಕಿದ ಸಂತೆಯ ಕಸದ ಶುಲ್ಕ ಪಾವತಿಲ್ಲ, ಈ ಖಾಸಗಿ ಜಾಗದಲ್ಲಿ ಜಾಜಾಟ ಮಾಡಿದ್ದಾರೆ. ಕಸದ ಶುಲ್ಕವನ್ನು ಕಟ್ಟುತ್ತೇನೆಂದು ಕಟ್ಟಿಲ್ಲಾ, ಬಡ ವ್ಯಾಪಾರಿಗಳ ಹಣ ನುಂಗಿದ್ದಾರೆ ಎಂದು ಕಂದಡ್ಕ ಆರೋಪಿಸಿದರು.
ಶಾಸಕರಿಗೆ ಆಧಿಕಾರಿಗಳು ತಪ್ಪು ಮಾಹಿತಿ ಕೊಟ್ಟಿದ್ದರಿಂದ ಅವರು ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಒಂದು ವಾರದಲ್ಲಿ ಜಾಗ ಮಾಡುತ್ತೇವೆ ಎಂದು ಅಧಿಕಾರಿಗಳು ಈಗ ಎಲ್ಲಿದ್ದಾರೆ,
ಜಾಗ ಗುರುತಿಸುವ ಸಮಸ್ಯೆ ಕಂದಾಯ ಇಲಾಖೆಯಿಂದ ಈ ಸಮಸ್ಯೆ ಆಗಿದೆ.ಜಟ್ಟಿಪಳ್ಳದಲ್ಲಿ 21 ಎಕ್ರೆ ಸರಕಾರಿ ಜಾಗ ಉಂಟುಂತ ತೋರಿಸುತ್ತದೆ. ಜಾಗ ಎಲ್ಲಿ ಇದೆ ಹೇಳಲಿ ಕಂದಾಯ ಅಧಿಕಾರಿಗಳು ಮನಸ್ಸು ಮಾಡಿದರೇ ಜಾಗದ ವ್ಯವಸ್ಥೆ ಆಗುತ್ತದೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದರು.
ನ.ಪ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ ಆಧಿಕಾರಿಗಳು ಸ್ಪಂದಿಸುತ್ತಿಲ್ಲ ಇದರಿಂದ ಸಮಸ್ಯೆ ಹಾಗೆಯೇ ಉಳಿದಿದೆ. ನಮ್ಮಲ್ಲಿ ಈಗ ಆರೋಗ್ಯಾಧಿಕಾರಿಗಳೇ ಇಲ್ಲ. ಸಾರ್ವಜನಿಕ ರಸ್ತೆಗೆ ಕಲ್ಲು ಇಟ್ಟ ಬಗ್ಗೆ ದೂರು ಕೊಟ್ಟಿದ್ದೇವೆ ಎಂದರು.
ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ, ನ.ಪಂ. ಸದಸ್ಯರಾದ ಶಿಲ್ಪಾ ಸುದೇವ್, ಶೀಲಾ ಅರುಣ್ ಕುರುಂಜಿ , ಸುಧಾಕರ ಕುರುಂಜಿ, ಸುಶೀಲ ಜಿನ್ನಪ್ಪ ಪೂಜಾರಿ, ಕಿಶೋರಿ ಶೇಟ್ ಉಪಸ್ಥಿತರಿದ್ದರು.