ಭಯ ಮತ್ತು ಬೆಧರಿಕೆಯ ಮೂಲಕ ಬದಲಾವಣೆ ಮಾಡಲು ಸಾಧ್ಯವಿಲ್ಲ – ಶೀಮದ್ ಸ್ವಾಮಿ ಆತ್ಮಾದಾಸ್ ಯಾಮಿ.
ಯಾವುದೇ ವ್ಯಕ್ತಿಯು ತಮ್ಮ ಗುರುಗಳನ್ನು ಸ್ಮರಿಸಬೇಕು ಗುರುವಿಲ್ಲದೇ ಯಾವುದು ಇಲ್ಲಾ ಅದುವೇ ಎಲ್ಲಾ ಧರ್ಮಗಳ ಸಂದೇಶವಾಗಿದೆ ಅಲ್ಲದೇ ಪ್ರತಿಯೊಬ್ಬ ಮನುಷ್ಯನು ಕೆಟ್ಟದ್ದನ್ನು ವಿರೋಧಿಸಿ ತಪ್ಪನ್ನು ತಪ್ಪು ಎಂದು ಹೇಳುವವರು ಮಾತ್ರ ಇಲ್ಲಿ ಭೋಧನೆ ಮಾಡಲು ಅರ್ಹರು ಅಲ್ಲದೇ ದೇವರ ಹೆಸರಿನಲ್ಲಿ ತಪ್ಪನ್ನೆ ಮಾಡುವವನನ್ನು ಎಂದಿಗೂ ಜನತೆ ಸ್ಮರಿಸುವುದಿಲ್ಲ ಎಂದು ಹೇಳಿದರು ಪ್ರವಾದಿಯು ಓರ್ವ ಎಂಜಿನಿಯರ್ ರಂತೆ ಪರಿವರ್ತನೆ ಮಾಡಲು ಶ್ರಮಿಸಿದ ಮೇರು ವ್ಯಕ್ತಿತ್ವದ ವ್ಯಕ್ತಿ ಅವರ ಅನುಯಾಯಿಗಳಾದ ಎಲ್ಲರು ಕೂಡ ಮಾತುಗಳ ಮೂಲಕ ಪ್ರೀತಿಯಿಂದಲೇ ಬದುಕನ್ನು ಬದುಕಬೇಕು ಎಂದು ಹೇಳಿದರು .ಪ್ರವಾದಿಯವರು ಮನುಷ್ಯರು ಮಾಡುವ ತಪ್ಪುಗಳನ್ನು ತಿದ್ದಿ ಹೇಳುವ ಮೂಲಕ ಜನರನ್ನು ತನ್ನೆಡೆಗೆ ಸೆಳೆದು ಜಗತ್ತಿನಲ್ಲಿ ಇಂದಿಗು ಎಲ್ಲರು ಸ್ಮರಿಸುವಂತಹ ಓರ್ವ ದೇವತಾ ವ್ಯಕ್ತಿಯಾಗಿದ್ದಾರೆ ಅಲ್ಲದೇ ಅನುಯಾಯಿಗಳಾಗಬೇಕೇ ಹೊರತು ಅನುಕೂಲಕ್ಕಾಗಿ ಅನುಯಯಿಗಳಾಗಬಾರದು ಎಂದು ಅವರು ಸುಳ್ಯದ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ನೇತೃತ್ವದಲ್ಲಿ ಲೋಕ ಪ್ರವಾದಿ ಮಹಮ್ಮದ್ ಮುಸ್ತಫ ರವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಮೀಲಾದ್ ಕಾಲ್ನಾಡಿಗೆ ಜಾಥ ಹಾಗೂ ದಫ್ ಕಾರ್ಯಕ್ರಮ ಸುಳ್ಯ ನಗರದಲ್ಲಿ ಸಾಗಿಬಂದು ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿ ಸಮಾಗಮಗೊಂಡು ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಲಾದ್ ಸಮಿತಿ ಅಧ್ಯಕ್ಷ ಶರೀಫ್ ಕಂಠಿ ವಹಿಸಿದ್ದರು ಉಮ್ಮರ್ ಕೆ ಎಸ್ ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಇಂದಿನ ರ್ಯಾಲಿಯಲ್ಲಿ ಭಾಗವಹಿಸಿ ಮುಸ್ಲಿಂ ಸಮುದಾಯದ ಸಂಪ್ರಾದಯಗಳನ್ನು ತಿಳಿಸಲು ಅವಕಾಶ ಕಲ್ಪಿಸಲಾಗಿದ್ದು ದಫ್ ಗಳ ಪ್ರದರ್ಶನ ಮಾಡುವ ಮೂಲಕ ಇಂದು ಸುಳ್ಯದಲ್ಲಿ ಇಸ್ಲಾಂ ಸೌಹಾರ್ದತೆಯನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಯ್ಯಿದ್ ಕುಂಞಿಕೋಯ ತಂಙಳ್ ಸ ಅದಿ ದುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು . ಸಭಾ ವೇದಿಕೆಯಲ್ಲಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ,ಡಾ. ಅಬ್ದುಲ್ ರಶೀದ್ ಸಖಾಫಿ ಝೈನಿ , ಸುಹೈಲ್ ದಾರಿಮಿ ನಪೋಕ್ಲು , ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.