ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಸುಳ್ಯ ತಾಲೂಕು ಗೌಡ ಸಮಿತಿ ವ್ಯಾಪ್ತಿಯ ಬಲೀಂದ್ರ ಅಲಂಕಾರ ಸ್ಪರ್ಧೆಯು ನಡೆಯಲಿದೆ ಎಂದು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತ ಪಾತಿಕಲ್ಲು ತಿಳಿಸಿದರು .
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ
ಗೌಡ ಮಹಿಳಾ ಘಟಕ ಸುಳ್ಯ ತಾಲೂಕು ಇದು ನಮ್ಮ ಸಮಾಜದ ಆಚಾರ-ವಿಚಾರ, ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗೌಡ ಸಮಾಜದವರಿಗಾಗಿ ತಾಲೂಕು ಮಟ್ಟದ ಬಲೀಂದ್ರ ಸ್ಪರ್ಧೆಯನ್ನು ಹಮ್ಮಿಕೊಂಡಿರುತ್ತದೆ. ಈ ಸ್ಪರ್ಧೆಯು ತಾಲೂಕಿನ ನಮ್ಮ ಸಮಾಜದ ಬಾಂಧವರಿಗೆ ಮಾತ್ರ ಸೀಮಿತವಾಗಿರುತ್ತದೆ. ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ನೈಸರ್ಗಿಕವಾದ ಅಲಂಕಾರಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಅಕ್ಟೋಬರ್ 22 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ 5000ರೂ.ವಿನ ಬಹುಮಾನ ಮತ್ತು ಫಲಕ, ದ್ವಿತೀಯ 3000ರೂ.ವಿನ ಬಹುಮಾನ ಮತ್ತು ಫಲಕ, ತೃತೀಯ 2000ರೂ.ವಿನ ಬಹುಮಾನ ಮತ್ತು ಫಲಕ ಹಾಗೂ ಇತರ 5 ಆಕರ್ಷಕ ಬಹುಮಾನವನ್ನು ನೀಡಲಾಗುವುದು, ಸ್ಪರ್ಧೆಯಲ್ಲಿ, ಭಾಗವಹಿಸುವವರು ತಮ್ಮ ವಿವರವನ್ನು ಕೆಳಗೆ ನೀಡಲಾದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ವಿನುತ ಪಾತಿಕಲ್ಲು – 8496866368
ಸವಿತಾ ಸಂದೇಶ್ – 9480534929
ಜಯಶ್ರೀ ರಾಮಚಂದ್ರ – 9481023779
ಪುಸ್ಪ ರಾಧಾಕೃಷ್ಣ – 9880669998
ಮೀನಾಕ್ಷಿ ಸುಂದರ್ ರಾಮಕಜೆ -8105878335
ತಾರ ಮಾಧವಗೌಡ ಬೆಳ್ಳಾರೆ – 9901770912 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು . ಪತ್ರಿಕಾಗೋಷ್ಠಿಯಲ್ಲಿ ಮೀನಾಕ್ಷಿ ಸುಂದರ ಗೌಡ ,ತಾರ ಮಾಧವ ಗೌಡ ಬೆಳ್ಳಾರೆ , ಹೇಮಲತ ದೇಂಗೋಡಿ ,ಪುಸ್ಪ ರಾಧಾಕೃಷ್ಣ , ಸವತಾ ಸಂದೇಶ್ , ಜಯಶ್ರೀ ರಾಮಚಂದ್ರ ತಾಲೂಕು ತರುಣ ಘಟಕದ ಅಧ್ಯಕ್ಷರಾದ ಪ್ರೀತಂ ಉಪಸ್ಥಿತರಿದ್ದರು.