ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಎಂ.ಆರ್ ಸ್ವಾಮಿ ಹಾಗೂ ಜೂನಿಯರ್ ಇಂಜಿನಿಯರ್ ನಾಗರಾಜ್ರವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಗೊಳಿ ಪಂಚಾಯತ್ ವ್ಯಾಪ್ತಿಯಲ್ಲಿ ೫ನೇ ಹಣಕಾಸು ಯೋಜನೆಯಲ್ಲಿ ಗುತ್ತಿಗೆದಾರರ ಬಿಲ್ಲು ಮಂಜೂರಾತಿ ಬಗ್ಗೆ ಬಿಲ್ ಪಾಸ್ ಮಾಡಲು ಲಂಚ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರೆಂಬ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ. ಎಂ.ಆರ್ ಸ್ವಾಮಿ ಈ ಹಿಂದೆ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದರು.
- Friday
- November 29th, 2024