Ad Widget

ಕಲ್ಬರ್ಪೆಗೆ ಕಸದ ವಾಹನ ಬರದಂತೆ ಬೃಹತ್ ಬಂಡೆ ಕಲ್ಲನ್ನು ರಸ್ತೆಗೆ ಅಡ್ಡಲಾಗಿ ಇಟ್ಟ ಸ್ಥಳೀಯ ಹೋರಾಟ ಸಮಿತಿ, ನ.ಪಂನಿoದ ಪೋಲಿಸ್ ಇಲಾಖೆಗೆ ದೂರು


ಸಮಸ್ಯೆಗಳನ್ನು ಶಾಸಕರ ನೇತೃತ್ವದಲ್ಲಿ ಪರಿಹಾರಕ್ಕೆ ಸಿದ್ದ , ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದರೆ

ಕಲ್ಚರ್ಪೆ ಕಸದ ವಿರುದ್ದ ಸ್ಥಳೀಯ ಹೋರಾಟ ಸಮಿತಿಯು ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಈ ವಿಚಾರವು ಹೊಸ ರೂಪ ಪಡೆದುಕೊಳ್ಳುತ್ತಿದೆ.
ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡು ಅಧಿಕಾರಿ ವರ್ಗದವರನ್ನು ಸ್ಥಳಕ್ಕೆ ಬರುವಂತೆ ಮಾಡಿದ ಹೋರಾಟಗಾರರು ಇದೀಗ ಸುಳ್ಯ ನಗರದಿಂದ ಕಲ್ಚರ್ಪೆಗೆ ಕಸ ತರುವ ಯಾವುದೇ ವಾಹನ ಬರದಂತೆ ರಸ್ತೆಯಲ್ಲಿ ಬೃಹತ್ ಬಂಡೆ ಕಲ್ಲು ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲು ಇಟ್ಟಿರುವ ಬಗ್ಗೆ ಮಾಹಿತಿ ತಿಳಿದ ನಗರ ಪಂಚಾಯತ್ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು ಅಲ್ಲದೇ ಹೋರಾಟ ಸಮಿತಿಯವರನ್ನು ಠಾಣೆಗೆ ಬರುವಂತೆ ಪೋಲಿಸ್ ಇಲಾಖೆಯು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಕಲ್ವೆರ್ಪೆ ತ್ಯಾಜ್ಯ ಘಟಕದ ಬಗ್ಗೆ ನಗರ ಪಂಚಾಯತ್ ಮತ್ತು ಸ್ಥಳೀಯರ ನಡುವೆ ನಡೆಯುತ್ತಿರುವ ಈ ಸಮರದ ಕುರಿತಾಗಿ ಅಮರ ಸುದ್ದಿಗೆ ನ.ಪಂ ಅಧ್ಯಕ್ಷರು ಮಾತನಾಡುತ್ತಾ ನಾವು ಸೌಹಾರ್ದತೆಯಿಂದ ಈ ಸಮಸ್ಯೆಗಳನ್ನು ಬಗೆಹರಿಸುತ್ತೆವೆ. ಸದಸ್ಯರೂ ಮತ್ತು ಜನಪ್ರತಿನಿಧಿಗಳು ಜೊತೆಯಾಗಿ ಕೆಲಸಗಳನ್ನು ಮಾಡುವ ಮತ್ತು ಶಾಸಕರ ನಿರ್ದೇಶನದ ಪ್ರಕಾರವೇ ಅಲ್ಲಿಯು ಸಮಸ್ಯೆಗಳು ಆಗದೇ ನಗರಕ್ಕೂ ಸಮಸ್ಯೆಗಳು ಬರದೆ ಇರುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಅಲ್ಲದೇ ಇಂದು ಕೂಡ ಶಾಸಕರಲ್ಲಿ ಮಾತನಾಡಿದ್ದು, ಅಲ್ಲಿನ ಸ್ಥಳೀಯರ ಸಮಸ್ಯೆಗಳು ಕೂಡ ನಮ್ಮ ಗಮನದಲ್ಲಿದೆ ಅದಕ್ಕಾಗಿ ಈಗಾಗಲೇ ನಾನು ಅಧಿಕಾರಿಗಳಲ್ಲಿ ಸಭೆ ನಡೆಸಲು ತಿಳಿಸಿದ್ದೆ ಆದರೆ ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕೆಲವೊಂದು ಸಭೆಗಳನ್ನು ನಡೆಸಲು ಅಸಾಧ್ಯವಾಗುತ್ತದೆ ಈ ಹಿನ್ನೆಲೆಯಲ್ಲಿ ನಾವು ಈಗಾಗಲೇ ಅಧಿಕಾರಿಗಳ ಮುಖೇನ ನಗರ ಪಂಚಾಯತ್ ಆವರಣದಲ್ಲಿಯೇ ಪ್ರತ್ಯೇಕ ಪಡಿಸಿ ಕಸಗಳನ್ನು ಕೊಂಡೊಯ್ಯುತ್ತಿದ್ದೇವೆ ಅದನ್ನು ಇನ್ನಷ್ಟು ಕಡಿತಗೊಳಿಸಿ ಟೆಂಡರ್ ನಡೆಸಿ ಕಸವನ್ನು ಬೇರೆ ಕಡೆಗೆ ಸಾಗಿಸುವ ಕೆಲಸದ ಬಗ್ಗೆ ನಾವು ಪ್ರಯತ್ನಿಸುತ್ತಿದ್ದೇವೆ ಅಲ್ಲದೇ ಅಲ್ಲಿಯತನಕ ಈ ಹಿಂದೆ ಯಾವ ರೀತಿಯಲ್ಲಿ ಕೆಲಸಗಳು ಆಗುತ್ತಿದ್ದವೋ ಅದೇ ಮಾದರಿಯಲ್ಲಿ ಬರ್ನಿಂಗ್ ಮಾಡಬೇಕಾಗುತ್ತದೆ ಎಲ್ಲರು ಸಹಕರಿಸಬೇಕು ಎಂದು ವಿನಂತಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!