ಸುಬ್ರಮಣ್ಯ ಕೆ ಎಸ್ ಎಸ್ ಪದವಿ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ) ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಸುಳ್ಯ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಪದವಿ ಕಾಲೇಜಿನ ಮಕ್ಕಳಿಗೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ದಿನೇಶ್ ಪಿ ಟಿ ಪ್ರಾಂಶುಪಾಲರು ಕೆ ಎಸ್ ಎಸ್ ಪದವಿ ಕಾಲೇಜು ಸುಬ್ರಮಣ್ಯ ಇವರು ವಹಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ವಿಮಲರಂಗಯ್ಯ ಮಾಜಿ ಅಧ್ಯಕ್ಷರು ಜನಜಾಗೃತಿ ವೇದಿಕೆ ಸುಳ್ಯ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ದುಶ್ಚಟ ದುರಭ್ಯಾಸದಿಂದ ಮಕ್ಕಳ ಮೇಲೆ ಆಗುವ ಪರಿಣಾಮದ ಬಗ್ಗೆ ವಿವರಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಧವ ಗೌಡ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರು ಕುಡಿತ ಡ್ರಗ್ಸ್ ಮುಂತಾದ ದುಶ್ಚಟದಿಂದ ಹೇಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ನಶೆ ಎಂಬ ನರಕ ಎಂಬ ಸಿನಿಮಾ ತೋರಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು ಕಾರ್ಯಕ್ರಮದಲ್ಲಿ ತೀರ್ಥರಾಮ ದೋಣಿಪಳ್ಳ ವಲಯ ಅಧ್ಯಕ್ಷರು, ಶ್ರೀಮತಿ ಪವಿತ್ರ ದಿನೇಶ್ ಒಕ್ಕೂಟದ ಅಧ್ಯಕ್ಷರು, ಶ್ರೀಮತಿ ಶ್ರೀಲತಾ ಉಪನ್ಯಾಸಕರು, ಕೃಷ್ಣಪ್ಪ ಎಂ ಮೇಲ್ವಿಚಾರಕರು, ಹರಿಣಾಕ್ಷಿ ಸೇವಾಪ್ರತಿನಿಧಿ, ಶಶಿಕಾಲ ವಿ ಎಲ್ ಇ ಉಪಸ್ಥಿತರಿದ್ದರು.
- Friday
- November 29th, 2024