ದಕ್ಷಿಣ ಕನ್ನಡ ಜಿಲ್ಲೆಗೆ ಸೆ.18 ರಂದು ಆಗಮಿಸಿದ್ದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಶ್ರೀಮತಿ ಪುಪ್ಪಾ ಅಮರನಾಥ್ ರವರು ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸುಳ್ಯ ಗ್ಯಾರಂಟಿ ಅನುಷ್ಠಾನ ಕಚೇರಿಗೆ ಭೇಟಿ ನೀಡಿದರು.
ತಾಲೂಕು ಪಂಚಾಯತ್‌ನಲ್ಲಿರುವ ಕಚೇರಿಗೆ ಬಂದ ಅವರು, ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರನ್ನು ಗೌರವಿಸಿದರು. ಬಳಿಕ ಪಂಚ ಗ್ಯಾರಂಟಿ ಅನುಷ್ಠಾನ ಕುರಿತು ಮಾಹಿತಿ ಪಡೆದರಲ್ಲದೆ, ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪುವಂತೆ ಸಮಿತಿ ನಿಗಾ ಇಡಬೇಕೆಂದು ಅವರು ಸೂಚನೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ವಕ್ಸ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಮಾನ್ ಮೊಗರ್ಪಣೆ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲ ಸದಸ್ಯ ರಂಜಿತ್ ರೈ ಮೇನಾಲ, ತಾಲೂಕು ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಇಬ್ರಾಹಿಂ ಶಿಲ್ಪಾ, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸಿದ್ದೀಕ್ ಕೊಕ್ಕೊ, ಶಾಹೀದ್ ಪಾರೆ ಮೊದಲಾದವರಿದ್ದರು.