ಸುಳ್ಯ ತಾಲೂಕು ಮಿಲಾದ್ ಸಮಿತಿಯ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ, ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ದಿನಾಂಕ 20-09- 2024ನೇ ಶುಕ್ರವಾರದಂದು ಮಿಲಾದ್ ಜಾಥಾ ಮತ್ತು ಸೌಹಾರ್ದ ಸಭೆ ನಡೆಯಲಿದೆ ಎಂದು ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷರಾದ ಶರೀಫ್ ಕಂಠಿ ತಿಳಿಸಿಸರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ದಿನಾಂಕ 20-09-2024ನೇ ಶುಕ್ರವಾರ ಸಂಜೆ 4.00 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಭಾಗದಲ್ಲಿ ಕಾಲ್ನಡಿಗೆ ಜಾಥಾ ಸಮಾಪ್ತಿಗೊಳ್ಳಲಿದೆ. ಈ ಕಾಲ್ನಡಿಗೆ ಜಾಥಾ ಪ್ರಖ್ಯಾತ ದಫ್ ತಂಡ ಮತ್ತು ಸ್ಕೌಟ್ ತಂಡಗಳ ಆಕರ್ಷಕ ಪ್ರದರ್ಶನಗಳೊಂದಿಗೆ ಸುಳ್ಯದ ರಾಜ ಬೀದಿಗಳಲ್ಲಿ ಸಾಗಿ ಬರಲಿದೆ. ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಪ್ರವಾದಿ ಸಂದೇಶ ಸಾರ್ವಜನಿಕ ಸಭೆ ನಡೆಯಲಿದ್ದು, ಇದರ ಮತ್ತು ಉದ್ಘಾಟನೆಯನ್ನು ಬಹು। ಸಯ್ಯದ್ ಕುಂಞಕೋಯ ತಂಬಳ ಸಅದಿ ಸುಳ್ಯ ನೆರವೇರಿಸಲಿದ್ದಾರೆ ಕಾರ್ಯಕ್ರಮದ ಮುಖ್ಯ ಪ್ರಭಾಷಣಕಾರರಾಗಿ ಅಂತರರಾಷ್ಟ್ರೀಯ ವಾಗಿ ಕೇರಳ ರಾಜ್ಯದ ಕುರುವಾರಕುಂಡ್ ಸಮನ್ವಯ ಗಿರಿ ಅಧೀನ ಮಠದ ಶ್ರೀ ಶ್ರೀಮಥ್ ಸ್ವಾಮಿ ಆತ್ಮಾದಾಸ್ ಯಾಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಲ್ಲದೆ ಮುಸ್ಲಿಮ್ ಧಾರ್ಮಿಕ ಪಂಡಿತರಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝನಿ ಖಾಮಿಲ್ ಸಖಾಫಿ ಎಂ.ಎ. ಪಿ.ಹೆಚ್.ಡಿ. ಮತ್ತು ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು ಹಾಗೂ ಇನ್ನಿತರ ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಮತ್ತು ವೇದಿಕೆಯಲ್ಲಿ ಪ್ರಖ್ಯಾತ ತಂಡಗಳ ದಫ್ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಕೆ ಎಸ್ ಉಮ್ಮರ್ ಮಾಹಿತಿ ನೀಡಿದರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿದ್ದಿಕ್ ಕೊಕ್ಕೊ ,ಕಲಂದರ್ ಶಾಫಿ ,ಅಝೀಝ್ ಪಾಂಗಣಂ , ಮಹಮ್ಮದ್ ಜುನೈದ್ , ಉನೈಸ್ ಪೆರಾಜೆ , ಮುನಾಫರ್ ನಾವುರು , ನವಾಝ್ ಜಯನಗರ , ಕಲಂದರ್ ಎಲಿಮಲೆ ಮತ್ತಿತರರು ಉಪಸ್ಥಿತರಿದ್ದರು.