
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಇಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ದೇವರಿಗೆ ವಿಶೇಷ ತುಳಸೀ ಅರ್ಚನೆ ನಡೆಯಿತು.
ಮದ್ಯಾಹ್ನ ಮಹಾಪೂಜೆ ನಂತರ ಸೋಣ ಶನಿವಾರ ಪ್ರಯುಕ್ತ ಬಲಿವಾಡು ಸಮಾರಾಧನೆ ನಡೆಯಿತು. ಸಾವಿರಾರು ಭಕ್ತಾದಿಗಳು ಬಲಿವಾಡು ಕೂಟದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರ ರಾದರು.