ಜೆಸಿಐ ಸಪ್ತಾಹ 2024ರ ಅಂಗವಾಗಿ ಬಿ.ಸಿ.ಎಂ ಹಾಸ್ಟೆಲ್ ಕುರುಂಜಿಭಾಗ್ ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ ಸೆ.10ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ (ರಿ) ಇದರ ಅಧ್ಯಕ್ಷರಾದ ಜೇಸಿ. ಗುರುಪ್ರಸಾದ್ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿ ಗಳಾಗಿ ಪೂರ್ವ ವಲಯಾದ್ಯಕ್ಷರಾದ ಜೇಸಿ, ಹೆಚ್.ಜಿ.ಎಫ್ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ. ವಿಜಯಲಕ್ಷ್ಮಿ ಪಿ. ಬಿ. ಭಾಗವಹಿಸಿ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಜೇಸಿಐ ಪಯಸ್ವಿನಿಯ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ನವೀನ್ ಕುಮಾರ್, ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಶ್ರೀಮತಿ. ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜೇಸಿಐಯ ಪೂರ್ವಾದ್ಯಕ್ಷರುಗಳು, ಪದಾಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಜೇಸಿಐ ಸುಳ್ಯ ಪಯಸ್ವಿನಿಯ ಮಹಿಳಾ ಅಧ್ಯಕ್ಷೆ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಉಪಾಧ್ಯಕ್ಷೆ ತಾರ ಚೂಂತಾರು ಜೇಸಿವಾಣಿ ವಾಚಿಸಿ, ಜೇಸಿ. ಸುರೇಶ್ ಕಾಮತ್ ವಂದಿಸಿದರು.