
ಸುಳ್ಯ ಪೊಲೀಸ್ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಸಂತೋಷ್ ರವರು ಸೆ. 5ರಂದು ಅಧಿಕಾರ ಸ್ವೀಕರಿಸಿದ್ದು, ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಸುಳ್ಯದಲ್ಲಿ ಸಮಗ್ರ ಮಾಹಿತಿ ತಿಳಿದೇ ಸುಳ್ಯಕ್ಕೆ ಬಂದಿದ್ದು ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಸುಳ್ಯದ ಮುಖ್ಯ ಪೇಟೆಯಲ್ಲಿ ಬಹಳ ವರ್ಷಗಳಿಂದ ಸವಾಲಾಗಿರುವ ಟ್ರಾಫಿಕ್ ಸಮಸ್ಯೆಗಳಿಗೆ ಇತ್ಯರ್ಥ ಮಾಡಲಾಗುವುದು. ಅದಕ್ಕಾಗಿ ಓರ್ವ ಸಿಬ್ಬಂದಿಯನ್ನು ಬಳಸಿಕೊಂಡು ನೇರವಾಗಿ ವಾಹನ ಸವಾರರ ಮನೆಗೆ ನೋಟಿಸ್ ನೀಡಲು ರೂಪುರೇಷೆ ಸಿದ್ದಪಡಿಸಿಕೊಳ್ಳಲಾಗಿದೆ . ಅಲ್ಲದೇ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು , ನಾಲ್ಕು ಚಕ್ರದ ವಾಹನ ಸವಾರರು ಸೀಟ್ ಬೆಲ್ಟ್ , ರಿಕ್ಷ ಚಾಲಕರು ತಮ್ಮ ಖಾಕಿ ಅಂಗಿಗಳನ್ನು ಮಾತ್ರ ಹಾಕಬೇಕು ಎಂದು ಹೇಳಿದರು. ಅಲ್ಲದೇ ಸುಳ್ಯದ ಪ್ರಮುಖ ರಸ್ತೆಯಲ್ಲಿ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಈ ಹಿಂದಿನಿಂದಲೇ ಜಾರಿಯಲ್ಲಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದೇ ಇದ್ದಲ್ಲಿ ನೇರವಾಗಿ ವಾಹನದ ಮಾಲಕರಿಗೆ ನೋಟಿಸ್ ಜಾರಿಯಾಗಲಿದ್ದು ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ. ವಾಹನ ಮಾಲಕ ಚಾಲಕರು ಗಮನದಲ್ಲಿ ಇರಿಸಿಕೊಂಡು ಟ್ರಾಫಿಕ್ ಸಮಸ್ಯೆಗಳನ್ನು ನಿವಾರಣೆಗೆ ನಿಯಮ ಪಾಲಿಸಿ ಸಹಕರಿಸಿ ಎಂದು ಹೇಳಿದರು. ಅಲ್ಲದೆ ಸುಳ್ಯದಲ್ಲಿ ಅಕ್ರಮವಾಗಿ ಕೋಳಿ ಅಂಕ , ಅಕ್ರಮ ಮರಳು ದಂದೆ , ಅಕ್ರಮ ಮಧ್ಯ ಮಾರಾಟ, ಮಟ್ಕಾ ದಂದೆ ಸೇರಿದಂತೆ ಇತರೆ ಯಾವುದೇ ಅಕ್ರಮಗಳು ಕಂಡಲ್ಲಿ ಸಾರ್ವಜನಿಕರು ನೇರವಾಗಿ ಉಪ ನಿರೀಕ್ಷಕರ ಗಮನಕ್ಕೆ ತರಬೇಕು ಅಲ್ಲದೇ ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು .
ಪಾರ್ಕಿಂಗ್ ನಿಯಮ ಉಲ್ಲಂಗಿಸಿದರೆ ಬರಲಿದೆ ನೋಟಿಸ್
ಸುಳ್ಯದ ಪ್ರಮುಖವಾಗಿ ಪಾರ್ಕಿಂಗ್ ನಿಯಮಗಳನ್ನು ಸುಳ್ಯ ನಗರದಲ್ಲಿ ಅಳವಡಿಸಲಾಗಿದ್ದು ಒಂದು ಬದಿಗೆ ದಿನ ಒಂದರಂತೆ ನಿಗದಿ ಪಡಿಸಲಾಗಿದ್ದು ಅದರಂತೆ ಮುಂಜಾನೆ 6 ರಿಂದ ರಾತ್ರಿ 8 ಗಂಟೆಯ ತನಕ ಈ ನಿಯಮ ಪ್ರತಿ ನಿತ್ಯ ಜಾರಿಯಲ್ಲಿ ಇರಲಿದೆ ಇದರ ಕುರಿತು ಅಂಗಡಿ ಮಾಲಿಕರುಗಳು ಕೂಡ ಗಮನವಿರಿಸಬೇಕು ಅಲ್ಲದೇ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಓರ್ವ ಪೋಲಿಸ್ ಸಿಬ್ಬಂದಿಯ ಮೂಲಕ ಕೇಸು ದಾಖಲಿಸುವ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ನಿಯಮ ಪಾಲನೆ ಮಾಡಿ ನಮ್ಮೊಂದಿಗೆ ಸಹಕರಿಸಬೇಕು ಎಂದು ಹೇಳಿದರು .