
ದಿ. ಪುಟ್ಟಯ್ಯ ಪೂಜಾರಿ ಹಾಗೂ ದಿ.ಗಿರಿಜಾ ಪುಟ್ಟಯ್ಯ ದಂಪತಿಗಳ ಪುತ್ರರಾಗಿರುವ ರಘು ಬಿಜೂರುರವರು 20-06-1966ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಗ್ರಾಮ ಮೊಗೇರಿಯಲ್ಲಿ ಪಡೆದುಕೊಂಡರು. ಪ್ರೌಢ ಶಿಕ್ಷಣವನ್ನು ಕಂಬದಕೋಣೆ, ಕಾಲೇಜು ನಾವುಂದ ಜೂನಿಯರ್ ಕಾಲೇಜು ಮತ್ತು ಜೂನಿಯರ್ ಕಾಲೇಜು ಬೈಂದೂರು, ಪದವಿ ಶಿಕ್ಷಣವನ್ನು ಸರಕಾರಿ ಮಹಾವಿದ್ಯಾಲಯ ಬೈಂದೂರಿನಲ್ಲಿ ಎ.ಎ, ಬಿಎಡ್ ಇನ್ ಸಂಸ್ಕೃತ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು.
ಬಾಲ್ಯದಲ್ಲೇ ಸತ್ಯಸಾಯಿ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪದವಿ ಮುಗಿದ ಮೇಲೆ ಸತ್ಯಸಾಯಿ ವಿದ್ಯಾಕೇಂದ್ರ ಅಳಿಕೆ – ಬಂಟ್ವಾಳ ಇಲ್ಲಿ 11 ವರ್ಷ ಅಧ್ಯಾಪಕನಾಗಿ ಸೇವೆ ಅನಂತರ ಬೆಂಗಳೂರಿನಲ್ಲಿ ಜ್ಞಾನಮಿತ್ರ ಪ್ರೌಢಶಾಲೆ (ಆಂಗ್ಲ) ಮತ್ತು ಜನಕ್ ವಿದ್ಯಾಲಯ ಬಿ.ಜಿ ರೋಡ್ ಇಲ್ಲಿ ೨ವರ್ಷ ಕೆಲಸ ಮಾಡಿದರು. (2003- ಆಗಸ್ಟ್) 18-8-2023ರಂದು ಎಸ್‌ಎಸ್‌ಪಿಯುನಲ್ಲಿ ಸೇವೆಗೆ ಸೇರಿದ್ದರು. ಹಿಂದೂಸ್ಥಾನಿ ಸಂಗೀತದಲ್ಲಿ ದಿ| ಆರ್.ಎಮ್ ಹೆಗ್ಗಡೆಯವರ ಶಿಷ್ಯನಾಗಿ ಕೆಲವು ವರ್ಷ ಸಂಗೀತ ಅಭ್ಯಾಸ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100 ಫಲಿತಾಂಶ ನಿರಂತರವಾಗಿ ಬರುತ್ತಿದೆ. ಮಕ್ಕಳಿಗೆ ತರಬೇತಿ ಕೊಟ್ಟು ಸಂಗೀತದಲ್ಲಿ (ನಾಡಗೀತೆ) ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. ಕಾಲೇಜಿನ ಸಭೆ ಸಮಾರಂಭಗಳಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟು ಸಿದ್ಧಗೊಳಿಸುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಸುಗಮ ಸಂಗೀತವನ್ನು ಕಲಿಸಿಕೊಟ್ಟಿದ್ದಾರೆ. ಇವರು ಬರುವ ವರ್ಷ 30-7-2025ಕ್ಕೆ ನಿವೃತ್ತಿ ಹೊಂದಲಿದ್ದಾರೆ.