
ಕಸ ವಿಲೇವಾರಿ ಪ್ಲಾಸ್ಟಿಕ್ ಶೆಡ್ ಸಹಿತ ಸರಕಾರಿ ಸ್ವತ್ತು ನಾಶ ಸಹಿತ 2020ರಿಂದ 24ರ ವರೆಗಿನ ಕಾಮಗಾರಿಯ ಸತ್ಯಶೋಧನೆಗಾಗಿ ಲೋಕಾಯುಕ್ತಕ್ಕೆ ದೂರು- ಹರ್ಷನ್ ಕೆ.ಟಿ
ಸುಳ್ಯ :ಕೊಡಿಯಾಲ ಗ್ರಾ.ಪಂನಲ್ಲಿ ಜಮಾಬಂಧಿಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷರಿಂದ ಭ್ರಷ್ಟಚಾರ ಆರೋಪ ಹೊರಿಸಿ ಸಿಬ್ಬಂದಿಯಿಂದ ವಿಡಿಯೋ ಚಿತ್ರಿಕರಿಸಿ ವೀಡಿಯೋ ಹಂಚಿಕೆ ಮಾಡಲಾಗಿ ಅದರಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿದ್ದು ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಗ್ರಾ.ಪಂ ಅಧ್ಯಕ್ಷರಾದ ಹರ್ಷನ್ ಕೆ ಟಿ ಹೇಳಿದರು .
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 28-೦4-2024 ರ ಜಮಾಬಂದಿ ಸಭೆಯಲ್ಲಿ ಅವ್ಯವಹಾರ ಎಂಬಂತೆ ಬಿಂಬಿಸಲು ಪೂರ್ವ ನಿಯೋಜಿತವಾಗಿ ಗ್ರಾ.ಪಂ ಸಿಬ್ಬಂದಿಯನ್ನು ಬಳಸಿಕೊಂಡು ಅವರ ಮಾತುಗಳನ್ನು ಮಾತ್ರ ವೀಡಿಯೋ ಚಿತ್ರೀಕರಿಸಿ ಅದನ್ನು ಎಡಿಟ್ ಮಾಡಿ ಬಿಜೆಪಿ ಗುಂಪಿನಲ್ಲಿ ಹಾಕಿದ್ದು ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು .
ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿದ ಬಳಿಕ ಗ್ರಾ.ಪಂನಲ್ಲಿ ಯಾವುದೇ ಅವ್ಯವಹಾರಗಳು ಆಗಿಲ್ಲ. ಇವರು ಹೇಳುವ ಅವ್ಯವಹಾರಕ್ಕೆ ಎಲ್ಲದಕ್ಕೂ ಸಹಿ ಹಾಕಿರುವುದು ಕೂಡ ಮಾಜಿ ಗ್ರಾ.ಪಂ ಅಧ್ಯಕ್ಷರಾದ ಪ್ರದೀಪ ರೈ ಅಜಿರಂಗಳರವರೆ ಹೊರತು ನಾವಲ್ಲಾ ಎಂದು ಹೇಳಿದರು. ಅಲ್ಲದೇ ಪ್ರದೀಪ್ ರೈ ಅಜಿರಂಗಳ ಮತ್ತು ಆಗಿನ ಅಭಿವೃದ್ಧಿ ಅಧಿಕಾರಿಯಾದಗ ಜಯಂತ್ ಕೆರವರು ಸೇರಿಕೊಂಡು ಯಾವುದೇ ಸಭೆಯಲ್ಲಿ ಮಾಹಿತಿ ನೀಡದೇ ಸಕ್ಷಮ ಪ್ರಾಧಿಕಾರದ ಪೂರ್ವ ಅನುಮತಿ ಪಡೆಯದೆ ಗ್ರಾ.ಪಂ ಕಾಂಪೌಂಡ್, ಪ್ಲಾಸ್ಟಿಕ್ ಶೆಡ್, ಗೇರುಬೀಜದ ಇಳುವರಿ ಬರುತ್ತಿದ್ದ ಮರಗಳನ್ನು ನಾಶ ಪಡಿಸಿದ್ದಾರೆ ಇದರ ವಿರುದ್ದ ಗ್ರಾಮಸ್ಥರು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆದುಕೊಂಡು ಇದರ ವಿರುದ್ದ ದೂರು ದಾಖಲಿಸಿದ್ದಾರೆ ಆದರೆ ಇಲ್ಲಿಯ ತನಕ ಯಾವುದೇ ಕ್ರಮ ಜರುಗಿಲ್ಲ ಅಲ್ಲದೇ ಇದೇ ವಿಚಾರವಾಗಿ ಗ್ರಾಮ ಸಭೆಯಲ್ಲಿ ಪ್ರಶ್ನೆಗಳು ಬರುವ ಹಿನ್ನೆಲೆಯಲ್ಲಿ ಗ್ರಾಮ ಸಭೆಗೆ ಗೈರು ಹಾಜರಾಗುತ್ತಿದ್ದಾರೆ ಎಂದು ಹೇಳಿದರು. ಅಲ್ಲದೇ ಸತ್ಯ ಶೋಧನೆಗಾಗಿ ೨೦೨೦-೨೧ ರಿಂದ ೨೪ರ ವರೆಗಿನ ಎಲ್ಲಾ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೋಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಚಿತ್ರಾ ಕೆ, ಸದಸ್ಯರಾದ ವಿಜಯಕುಮಾರಿ ಉಪಸ್ಥಿತರಿದ್ದರು.