ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಕ್ರೀಡೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಸಾಧನೆಗೈಯುವಂತಾಗಲಿ ಅವರು ಶ್ರೀ ಪಿ ಎಸ್ ಗಂಗಾಧರ್ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಗೌಡ ಸಮುದಾಯ ಭವನ ಕೊಡಿಯಾಲಬೈಲ್ ಸುಳ್ಯ ಇಲ್ಲಿ ನಡೆದ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಧ್ಯಕ್ಷ ಸ್ಥಾನ ವಹಿಸಿದ್ದ ಎ ಓ ಎಲ್ ಇ (ರಿ )ಅಧ್ಯಕ್ಷರಾದ ಡಾ ಕೆ.ವಿ.ಚಿದಾನಂದ ಅವರು ಮಾತನಾಡಿ ಗ್ರಾಮೀಣ ಕ್ರೀಡಾ ಕೂಟಕ್ಕೆ ಉತ್ತೇಜನ ಮುಖ್ಯ.ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆಗೈಯುವಂತಾಗಲಿ ಎಂದು ಆಶಿಸಿದರು.ಗೌರವ ಉಪಸ್ಥಿತರಾಗಿದ್ದ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಸೂoತೋಡು,ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢ ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು,ಆಡಳಿತ ಮಂಡಳಿಯ ಕಾರ್ಯದರ್ಶಿ ಹೇಮನಾಥ್ ಕೆ.ವಿ,ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರು, ಅರಂತೋಡು ಎನ್ನೆoಪಿಯುಸಿಯ ದೈ ಶಿ ನಿರ್ದೇಶಕರಾದ ಶಾಂತಿ ಎ.ಕೆ,ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ,ಸುಳ್ಯ ಎನ್ನೆoಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಕಬಡ್ಡಿಯಲ್ಲಿ ಸಾಧನೆಗೈದ ಅಭಿಷೇಕ್ ಕೆ ಎಸ್ , ನಿತಿನ್ ವಿ ನಾಯ್ಕ್ ಉಪಸ್ಥಿತರಿದ್ದರು.ಅಭಿಷೇಕ್ ಕೆ ಎಸ್, ನಿತಿನ್ ವಿ ನಾಯ್ಕ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಶ್ರೀ ಹೇಮನಾಥ್ ಕೆ.ವಿ.ಅಂಕಣ ಉದ್ಘಾಟಿಸಿದರು.ವಿದ್ಯಾರ್ಥಿಗಳಾದ ಚಿಂತನ್ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ ಸ್ವಾಗತಿಸಿ,ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ವಂದಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.ಸಮಾರೋಪ ಸಮಾರಂಭದಲ್ಲಿ ಎನ್ನೆoಸಿಯ ಆಡಳಿತ ಅಧಿಕಾರಿ ಶ್ರೀ ಚಂದ್ರಶೇಖರ ಪೇರಾ ಲು, ಎನ್ನೆoಸಿಯ ನಿವೃತ್ತ ದೈ ಶಿ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ಸುಳ್ಯ ಎನ್ನೆoಪಿಯುಸಿ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ರೋಟರಿ ಕಾಲೇಜಿನ ಪ್ರಾಚಾರ್ಯರಾದ ಶೋಭಾ ಬೊಮ್ಮಟ್ಟಿ ಉಪಸ್ಥಿರಿದ್ದು ಬಹುಮಾನ ವಿತರಿಸಿದರು.ಸುಳ್ಯ ಎನ್ನೆoಪಿಯುಸಿಯ ದೈ ಶಿ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ಸಂಸ್ಥೆಯ ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ,ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು.ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಯೋಗಿ ತೀರ್ತೆಶ್ ಯಾದವ್ ವೀಕ್ಷಕ ವಿವರಣೆ ನೀಡಿದರು.ಹುಡುಗರ ವಿಭಾಗದಲ್ಲಿ ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ (ಪ್ರ ) ರೋಟರಿ ಪಿಯು ಕಾಲೇಜು (ದ್ವಿ ), ಹಾಗೂ ಹುಡುಗಿಯರ ವಿಭಾಗದಲ್ಲಿ ಶ್ರೀ ಶಾರದಾ ಪಪೂ ಕಾಲೇಜು ಸುಳ್ಯ (ಪ್ರ )ರೋಟರಿ ಪಿಯು ಕಾಲೇಜು ( ದ್ವಿ )ಸ್ಥಾನ ಪಡೆದುಕೊಂಡವು.ಸರ್ವಾoಗೀಣ ಆಟಗಾರರಾಗಿ ಮಿಲನ್ ಮತ್ತು ಅನನ್ಯ ಕೆ.ಬಿ ರೋಟರಿ ಸುಳ್ಯ , ಮತ್ತು ಉತ್ತಮ ದಾಳಿಗಾರರಾಗಿ ಸುಳ್ಯ ಎನ್ನೆoಪಿಯುಸಿ ವಿದ್ಯಾರ್ಥಿಗಳಾದ ಜೀವನ್ ಮತ್ತು ಹರ್ಷಿತ ಕೆ.ಯು. ಹಾಗೂ ಉತ್ತಮ ಹಿಡಿತಗಾರರಾಗಿ ಸುಳ್ಯ ಎನ್ನೆoಪಿಯುಸಿಯ ಮಣಿಕಂಠ, ಶಾರದಾ ಕಾಲೇಜಿನ ರಶ್ಮಿ ವೈಯಕ್ತಿಕ ಬಹುಮಾನ ಪಡೆದುಕೊಂಡರು.ವಿವಿಧ ಕಾಲೇಜಿನ ತಂಡದ ವ್ಯವಸ್ಥಾಪಕರು, ದೈ ಶಿ ನಿರ್ದೇಶಕರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
- Thursday
- November 21st, 2024