Ad Widget

ಅರಮನೆ ನಗರದಲ್ಲಿ ಯಶಸ್ವಿ ಕಂಡ ಸಜ್ಜನ ವಿಶೇಷ ತರಬೇತಿ ಕಾರ್ಯಗಾರ

ಉದ್ಯೋಗ, ಶೈಕ್ಷಣಿಕ, ಸಾಂಸ್ಕೃತಿಕ ,
ಕನ್ನಡ ನಾಡು ನುಡಿ, ಜಲ-ನೆಲದ ಹಾಗೂ ವಿವಿಧ ರಂಗಗಳಲ್ಲಿ ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಕಾರ್ಯಾಚರಣೆ ನಡೆಸುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರಾಜ್ಯಾದ್ಯಂತ ನಡೆಸಿಕೊಂಡು ಬಂದಿದೆ. ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ವೇದಿಕೆ ಸಜ್ಜುಗೊಳಿಸಿ ಯಶಸ್ವಿಯಾಗಿ ಪೂರೈಸಿದೆ.

ಈ ಒಂದು ಕಾರ್ಯಕ್ರಮವನ್ನು ಆಗಸ್ಟ್‌ 24 ರಂದು ಮೈಸೂರಿನ ಹೋಟೆಲ್ ಲೀ ರುಚಿಯಲ್ಲಿ “ಮಾನವ ಸಂಪನ್ಮೂಲ ನಾವೀನ್ಯ ನಾಯಕರು – ಕೌಶಲ್ಯ ಹಾಗೂ ತಂತ್ರಜ್ಞಾನ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ” ಹಮ್ಮಿಕೊಂಡಿದ್ದು ರಾಜ್ಯದ ವಿವಿಧ ಭಾಗಗಳಿಂದ ಸರಿ ಸುಮಾರು 40ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ದ್ದು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಡಾ. ಅನಂತ ಗೌಡ ರವರು ಉದ್ಘಾಟಿಸಿ ಸ್ಪರ್ಧಾತ್ಮಕ ಜಗತ್ತಿನ ಈ ದಿನಗಳಲ್ಲಿ ಯುವ ಪೀಳಿಗೆಯು ಕಲಿಕೆಯ ಮುಖಾಂತರ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಕಾರ್ಖಾನೆಗಳಲ್ಲಿ ಅಧ್ಯಯನ ಮಾಡಲು ಅವಕಾಶ ಒದಗಿಸಿ ಕೊಡುವ ಮೂಲಕ ಕೌಶಲ್ಯ ವೃದ್ಧಿ ಮಾಡಲು ಸಹಕರಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಸಜ್ಜನ ಪ್ರತಿಷ್ಠಾನವು ಈ ಎಂಟು ವರ್ಷಗಳಲ್ಲಿ ಮಾಡಿಕೊಂಡು ಬಂದಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಗಾರವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆಗಮಿಸಿದ ಅತಿಥಿಗಳಿಗೆ ಗೌರವಿಸಿ, ಯುವ ಸಮೂಹ ಈ ದೇಶದ ಆಸ್ತಿ ಹಾಗಾಗಿ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವುದರ ಮುಖಾಂತರ ದೇಶದ ಅಭಿವೃದ್ಧಿ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದರು. ಇಂತಹ ತರಬೇತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಆಯೋಜಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಇನ್ನು ಮುಂದೆ ಇತರ ಜಿಲ್ಲೆಗಳಲ್ಲೂ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಂಜನಗೂಡಿನಲ್ಲಿ ಕಾರ್ಯಾಚರಿಸುತ್ತಿರುವ ಜುಬ್ಲಿಯೆಂಟ್ ಫರ್ಮೋವ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀ ಸುಬ್ರಹ್ಮಣ್ಯ ರವರು ಇಂದಿನ ದಿನಗಳಲ್ಲಿ ತರಬೇತಿಯ ಮಹತ್ವದ ಕುರಿತು ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಶ್ರೀ ಅಲಿಯನ್ಸ್ ಮೆಕಾಟ್ರಾನಿಕ್ಸ್ ಪ್ರವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುದೇಶ್ಕರ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಾದೇಶಿಕ ಕಚೇರಿ ಮೈಸೂರು ವಿಭಾಗದ ಮೇಲ್ವಿಚಾರಕರಾದ ಶ್ರೀ ಸಂದೀಪ್ ಬಿ ಸಿ, ಮೈಸೂರಿನ ದೇವಾಶ್ಯ ಲಾ ಅಸೋಸಿಯೇಟ್ಸ್ ಇದರ ಅಡ್ವಕೇಟ್ ಶ್ರೀ ವಿಶ್ವನಾಥ್ ದೇವಶ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ವೇದಿಕೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ತರಬೇತಿಯನ್ನು ನೀಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಫಾರ್ಮಡ್ ಲಿಮಿಟೆಡ್ ನ ಖ್ಯಾತ ತರಬೇತುದಾರರು ಹಾಗೂ ತರಬೇತಿ ವಿಭಾಗದ ಸಹಾಯಕ ಉಪಾಧ್ಯಕ್ಷರಾದ ಶ್ರೀ ವಿಕ್ರಂ ಸಾಗರ್ ಸಕ್ಸೇನಾ ರವರು ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾದರು.

ಈ ಕಾರ್ಯಕ್ರಮದ ಸ್ವಾಗತವನ್ನು ಕ್ರಸೇಂಟ್ ಕನ್ಸಲ್ಟೆಂಟ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಇಸ್ಮಾಯಿಲ್ ಜರಾ ರವರು ನೆರವೇರಿಸಿ ಬಿಈಎಂಎಲ್ ಲಿಮಿಟೆಡ್ ಇದರ ಮಾನವ ಸಂಪನ್ಮೂಲ
ವ್ಯವಸ್ಥಾಪಕರಾದ ಶ್ರೀ ಆಸಿಫ್ ಇಕ್ಬಾಲ್ ಎಲಿಮಲೆಯವರು ನಿರೂಪಿಸಿದರು. ಇದಲ್ಲದೆ ಸಜ್ಜನ ಪ್ರತಿಷ್ಠಾನದ ನಿರ್ದೇಶಕರುಗಳಾದ ತಾಜುದ್ದೀನ್ ಉಬೈದು, ಶಶಿಕಾಂತ್ ಬೆಡಸೂರು, ಮಂಜುನಾಥ್ ಹಿರಿಯೂರು ಮತ್ತಿತರರು ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!