ಪ್ರಾಚೀನ ಭಾರತದಲ್ಲಿ ಅನಾದಿಕಾಲದಿಂದಲೂ ತಾಯಿಗೆ ಮಹತ್ವದ ಸ್ಥಾನಮಾನವನ್ನು ನೀಡಿದ ಕಣ್ಣಿಗೆ ಮೊದಲು ಕಾಣುವ ಏಕೈಕ ದೇವತೆಯೇ ಎಂದು ಈಕೆಯನ್ನು ಸಂಬೋಧಿಸಲಾಗಿದೆ. ಹುಟ್ಟುವ ಪ್ರತಿಯೊಂದು ಮಗು ಉಚ್ಚರಿಸುವ ತೊದಲು ನುಡಿಯೇ ಅ…. ಮ್ಮಾ…
ಈ ಮಹಾ ತಾಯಿಯೆಂಬ ರೂಪವನ್ನು ತಾಳಿರುವ ಮೂಲ ರೂಪವೇ ಈ ಹೆಣ್ಣು. ಈಕೆ ಹೆಣ್ಣೆಂದು ಪದ ನಾಮವನ್ನು ಹಣೆ ಪಟ್ಟಿಯಲ್ಲಿ ಧರಿಸಿ ಭವಿಷ್ಯದಲ್ಲಿ ತಾಯಿಯೆಂಬ ಅದ್ಭುತವಾದ ಪಾತ್ರವನ್ನು ವಹಿಸುತ್ತಾಳೆ. ಆದರೆ ಇಂದಿನ ಜಾಯಮಾನದಲ್ಲಿ ಹೆಣ್ಣೆಂಬ ಅಬಲೆಯ ಪ್ರಸ್ತುತ ಸ್ಥಿತಿಯನ್ನು ಸ್ವಲ್ಪ ಅವಲೋಕಿಸುವುದಾದರೆ ಇಂದು ಹೆಣ್ಣಿನ ಸ್ಥಿತಿ ಶೋಚನಿಯವಾಗಿದೆ. ಆಕಾಶದೆತ್ತರ ಹಾರುತ್ತಿರುವ ವಿಮಾನವು ಧೊಪ್ಪನೆ ಪತನಗೊಂಡಂತೆ ಕುಸಿಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೊಲ್ಕತ್ತಾದಲ್ಲಿ ನಡೆದ ವೈದ್ಯ ಮೇಲಿನ ಅತ್ಯಾಚಾರ ಕೊಲೆಯ ನಂತರ ಇದೊಂದು ಸಾಂಕ್ರಾಮಿಕ ರೋಗದಂತೆ ಹರಡಿ ದಿನೇ ದಿನೇ ದೇಶದಾದ್ಯಂತ ಹಲವು ಸಂಖ್ಯೆಯಲ್ಲಿ ಅತ್ಯಾಚಾರ ನಡೆಯುತ್ತಿದೆ.
ಆದರೆ ಒಮ್ಮೆ ಯೋಚಿಸಿ 70 ವರ್ಷದ ಮುದುಕ 6ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದಾಗ. ಪ್ರತಿದಿನ ತನಗೆ ಚಾಕಲೇಟ್ ನೀಡಿ ಎತ್ತಿ ಮುದ್ದಾಡುತ್ತಿದ್ದ ಅಜ್ಜನ ಬಗ್ಗೆ ಆ ಮಗುವು ಎಂತಹ ಮನೋಭಾವನೆಯನ್ನು ಬೆಳೆಸಿರಬಹುದೆಂದು ನೀವು ತುಸು ಯೋಚಿಸುವಿರಾ..? ಇದೊಂದು ಅಮಾಯಕವಾದ ಸಂಗತಿ ಅಲ್ಲವೇ.
ಇಂದು ಹೆಣ್ಣನ್ನು ಸಮಾಜದಲ್ಲಿ ನೋಡುವ ಕಣ್ಣುಗಳು ಭ್ರಾತೃತ್ವದ ಕಲ್ಪನೆಯೆಂಬ ಕನ್ನಡಿಯು ಒಡೆದು ನುಚ್ಚುನೂರಾಗಿದೆ.
ಕೊನೆಯದಾಗಿ ಹೇಳುವುದಾದರೆ ಕುಟುಂಬಗಳಲ್ಲಿ ಗಂಡು- ಹೆಣ್ಣು ಎನ್ನುವ ಭೇದವಿಲ್ಲದೆ ಮಕ್ಕಳನ್ನು ಬೆಳೆಸಬೇಕು. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಗಂಡು- ಹೆಣ್ಣು ಒಬ್ಬರಿಗೊಬ್ಬರು ಹೇಗೆ ಪೂರಕವಾಗಿರುವಂತೆ. ಅಲ್ಲದೆ ಹೆಣ್ಣನ್ನು ಗೌರವಿಸಬೇಕಾದ ಅನುಕ್ರಮವನ್ನು ಮಕ್ಕಳಿಗೆ ಅದರಲ್ಲಿಯೂ ಗಂಡು ಮಕ್ಕಳಿಗೆ ತಿಳಿ ಹೇಳುತ್ತಿರಬೇಕು ಸದಾ… ಏಕೆಂದರೆ ನಿಮಗೆ ಜನ್ಮ ನೀಡಿದ ಆ ತಾಯಿಯೂ ಒಂದು ಹೆಣ್ಣು ಎಂಬುದನ್ನು ಮರೆಯದಿರಿ…
ಕಿಶನ್. ಎಂ
ಪವಿತ್ರ ನಿಲಯ ಪೆರುವಾಜೆ