ಸುಳ್ಯದ ಹಳೆಗೇಟಿನ ಸಾಂಸ್ಕೃತಿಕ ಸಂಘದ ಇದರ ವತಿಯಿಂದ ನಡೆಯುವ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಸಂಜೆ ಹಳೆಗೇಟು ವಸಂತ ಕಟ್ಟೆಯ ಬಳಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಶ್ರೀನಿವಾಸ್ ರಾವ್, ಕಾರ್ಯದರ್ಶಿ ಕೆ.ಶಿವನಾಥ್ ರಾವ್. ಉಪಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಯು. ಚಿತ್ತರಂಜನ್, ಸಚಿನ್ ರಾವ್, ಯತಿನ್ ರಾವ್, ಧನಂಜಯ್ ಪಂಡಿತ್, ರಾಜೇಶ್, ಗಣೇಶ್ ಕೊಯಿನ್ಗೋಡಿ, ವಿಜಯ್ ಕುಮಾರ್, ಜ್ಞಾನೇಶ್ವರ್ ಶೇಟ್, ಗೌತಮ್ ಭಟ್ ಮತ್ತು ಸಮಿತಿಯ. ಸದಸ್ಯರು ಉಪಸ್ಥಿತ ರಿದ್ದರು
ದಿನಾಂಕ.07.09.24 ರಂದು ಮುಂಜಾನೆ 7ಗಂಟೆಗೆ ಗಣಪತಿ ಹವನ, ಮೂರ್ತಿ ಪ್ರತಿಷ್ಠಾಪನೆ ನಡೆದು ಮಧ್ಯಾಹ್ನ ಮಹಾಪೂಜೆ ಸಂಜೆ 6 ಗಂಟೆ ಗೆ ದೀಪಾಂಜಲಿ ಮಹಿಳಾ ಮಂಡಲ ಶಾಂತಿನಗರ ಇವರಿಂದ ಭಜನೆ.. ರಾತ್ರಿ 7.00ಗಂಟೆಗೆ ಸಾಂಸ್ಕತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ದಿವಾಕರ ಎಂ.ಸೇರ್ಕಜೆ,ಸುಳ್ಯ ಇವರು ಕಾರ್ಯಕ್ರಮ ವನ್ನೂ ಉದ್ಘಾಟನೆ ಮಾಡಲಿದ್ದು ನಂತರ ನೃತ್ಯ ಶಿಕ್ಷಕಿ ಶ್ರೀಮತಿ ಸವಿತಾ ಕಿರಣ ಸಂಪಾಜೆ ತೊಡಿಕಾನ ಶಾಖೆ ಇವರಿಂದ ನೃತ್ಯ ವೈವಿಧ್ಯ,ಹಾಗೂ ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರುಗು ನಡೆಯಲಿದೆ
ದಿ.8.09.24 ರಂದು ಸಂಜೆ 6 ರಿಂದ ಗಜಾನನ ಭಜನಾ ಸಂಘ ಜಯನಗರ ಇವರಿಂದ ಭಜನೆ ರಾತ್ರಿ 7.30 ರಿಂದ ಸೌಂಡ್ ಆಫ್ ಮೆಲೋಡಿ ಇವರಿಂದ ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ ಭಕ್ತಿ, ಭಾವ, ಚಿತ್ರಗೀತೆಗಳ ಸಂಗಮ ಸಂಗೀತ ರಸಮಂಜರಿ ನಡೆಯಲಿದೆ
09.09.24 ರಂದು ಮದ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ.
ಸಂಜೆ ಗಂಟೆ 5ರಿಂದ ವೈಭವದ ಶೋಭಾಯಾತ್ರೆ ಯು ಸುಳ್ಯ ದ ಮುಖ್ಯ ರಸ್ತೆ ಯಲ್ಲಿ ಸಾಗಿ ಬ್ರಹ್ಮರಗಯದ ಪವಿತ್ರ ನದಿಯಲ್ಲಿ ಜಲಸ್ಥಂಬನ ಗೊಳ್ಳಲಿದೆ ಎಂದು ಸಂಘಟಕರು ಮಾಹಿತಿ ನೀಡಿರುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ಹಳೆಗೇಟಿನ ಶಿವಾಜಿ ಯುವವೃಂದದ ಸದಸ್ಯರು ಸಹಕಾರ ನೀಡಲಿದ್ದಾರೆ.