
ಇಂದು ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ವಿವಿಧ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಸಾರ್ವಜನಿಕರೇ ಖರ್ಚು ಹಾಕಿ ನಿರ್ಮಾಣ ಮಾಡಿದ ತೂಗು ಸೇತುವೆ ಮುಳುಗಡೆ ಯಾಗಿದೆ. ಕಸ ಬಿದಿರು, ಹಾಗೂ ಮರದ ಗೆಲ್ಲುಗಳು ಸಿಲುಕಿ ತೂಗು ಸೇತುವೆಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.